

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಅಮೋಘ ಸಾಧನೆ ಮಾಡುವಲ್ಲಿ ಮೇಜರ್ ಧ್ಯಾಮಚಂದ್ ಕೊಡುಗೆ ದೊಡ್ಡದು. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಮೂರು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿ ಬಂಗಾರದ ಪದಕ ಗೆಲ್ಲುವಲ್ಲಿ ಮಹತ್ತರ ಕೊಡುಗೆ ನೀಡಿದ್ದರು ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಕಾಶ ತಿವಾರಿ ಹೇಳಿದರು.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ ಅವರ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಜರ್ಮನಿಯ ನಾಯಕ ಅಡಾಲ್ಪ ಹಿಟ್ಲರ್ ಅವರು ನೀಡಿದ ಆಮಿಷವನ್ನು ತಿರಸ್ಕರಿಸಿ ಧ್ಯಾನಚಂದ ಕೇವಲ ಭಾರತ ದೇಶವನ್ನು ಮಾತ್ರ ಪ್ರತಿನಿಧಿಸುವುದಾಗಿ ಹೇಳಿದ್ದರು ಎಂದರು.
ವಿವಿ ಕುಲಸಚಿವ ಪೊ›. ಬಿ ಎಸ್ ಅನಾಮಿ, ಕ್ರೀಡಾ ಚಟುವಟಿಕೆಗಳ ಸಂಯೋಜಕ ಪೊ›. ವಿಜಯಕುಮಾರ ನಿಂಬಗಲ್, ಕ್ರೀಡಾ ನಿರ್ದೇಶಕ ಜಯದೇವ ದನದಮನಿ ಇತರರು ಇದ್ದರು.
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಅಡ್ವಾನ್ಸ ಸಾಯನ್ಸ ವಿಭಾಗದ ಪ್ರಾಧ್ಯಾಪಕ ನಾಗರಾಜ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು.