ಧ್ಯಾನಚಂದ ಕ್ರೀಡಾಕೂಟ ಇಂದಿನಿಂದ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಿತಿ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನ ನಿಮಿತ್ತ ಆ. 11ರಿಂದ 29ರವರೆಗೆ ಪಿಯುಸಿಯಿಂದ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಗೆ ಮೆ. ಧ್ಯಾನಚಂದ ಕ್ರೀಡಾ ಕೂಟ ಆಯೋಜಿಸಲಾಗಿದೆ. 15 ರಿಂದ 18 ತಂಡಗಳು ಭಾಗವಹಿಸಲಿವೆ.
ಹಾಕಿ, ಬಾಸ್ಕೆಟ್​ಬಾಲ್​, ವಾಲಿಬಾಲ್​ ಸೇರಿ ವಿವಿಧ ಕ್ರೀಡೆಗಳು ನಡೆಯಲಿವೆ. ಆ. 11ರಂದು ಬೆಳಗ್ಗೆ 9 ಗಂಟೆಗೆ ಮಾಜಿ ಹಾಕಿ ಆಟಗಾರ ಡಾ. ರಾಜೇಂದ್ರ ಪೋದ್ದಾರ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಎಸಿಪಿ ಪ್ರಶಾಂತ ಸಿದ್ದನಗೌಡರ, ವಿನೋದ ಅಸೂಟಿ, ಲಕ್ಷ್ಮಣ ಶಿರಕೋಳ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net