ನೆಗಳೂರ ದ್ಯಾಮವ್ವದೇವಿ ಜಾತ್ರೆ ಮೇ 2ರಿಂದ

gtl
Published on

ಗುತ್ತಲ: ಸಮೀಪದ ನೆಗಳೂರ ಗ್ರಾಮದ ಶ್ರೀ ಗ್ರಾಮದೇವಿ ದ್ಯಾಮವ್ವದೇವಿ ಜಾತ್ರೆ ಮೇ 2ರಿಂದ 7ರವರೆಗೆ ಜರಗುಲಿದೆ.

ಮೇ 2ರಂದು ನೆಗಳೂರ ಗ್ರಾಮದ ಎಲ್ಲ ದೇವರುಗಳಿಗೆ ಉಡಿ ತುಂಬುವ ಹಾಗೂ ಕಾಯಿ ಒಡೆಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ ದೇವರಿಗೆ 5 ದಿನದ ಅಂಕಿ ಹಾಕುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುವುದು.

6ರಂದು ಬೆಳಗ್ಗೆ ನೆಗಳೂರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಸ್ವಾಮೀಜಿ ಅವರು ಶ್ರೀ ದ್ಯಾಮವ್ವದೇವಿ ಮೂರ್ತಿಗೆ ಜೀವಕಳೆ ತುಂಬುವರು. ನಂತರ ಗ್ರಾಮದ ಸುಮಂಗಲೆಯರು ದೇವಿಗೆ ಹಣ್ಣು ಕಾಯಿ ಮಾಡಿಸುವ ಕಾರ್ಯ ಜರುಗುವುದು. ರಾತ್ರಿ 8ಗಂಟೆಗೆ ಅಂಲಕರಿಸಿರುವ ರಥದಲ್ಲಿ ದೇವಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಮಂಗಲವಾದ್ಯದೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ದೇವಸ್ಥಾನದ ಬಳಿಯ ಚೌತಮನೆಯಲ್ಲಿ ಬುಧವಾರ ಬೆಳಗ್ಗೆ 5ಗಂಟೆಗೆ ದೇವಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ದೇವಿಗೆ ಹಣ್ಣು ಕಾಯಿ ಮಾಡಿಸುವ ಕಾರ್ಯ, ಹರಕೆ ನೆರವೇರಿಸುವ ಕಾರ್ಯ ಜರುಗುವವು. ನಂತರ ಸಂಜೆ 5ಗಂಟೆಗೆ ದ್ಯಾಮವ್ವದೇವಿಯನ್ನು ಗಡಿಗೆ ಕಳಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳುವುದು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಜಾತ್ರೆ ಅಂಗವಾಗಿ ಮಂಗಳವಾರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಗ್ರಾಮಸ್ಥರಾದ ಕೃಷ್ಣರಡ್ಡಿ ಮೈದೂರು, ಎಸ್.ಎಂ. ಸಪ್ಪಿನ, ಬಸವಂತಪ್ಪ ಹಳ್ಳಾಕರ, ಬಸಣ್ಣ ಪತ್ರಿ, ಪರಮೇಶ್ವರಯ್ಯ ಮಠಪತಿ, ಶಿವನಗೌಡ ಹರಕಂಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net