ಧೂಳಖೇಡ ಗ್ರಾಪಂಗೆ 300 ಬಸವ ವಸತಿ ಮನೆಗಳು ಮಂಜೂರು

Dhulakheda, Basava Housing House, Suresh Gowda Patila, Gramam Office, Homeless Eligible Beneficiaries, MLA,
ಧೂಳಖೇಡ ಗ್ರಾಮದ ಸಮುದಾಯ ಭವನ, ಭೀಮಾಶಂಕರ ನಗರದಲ್ಲಿ ಬಸವ ವಸತಿ ಮನೆಗಳ ಆಯ್ಕೆ, ಅಭಿವೃದ್ಧಿ ಕಾಮಗಾರಿ ಕುರಿತು ವಾರ್ಡ್ ಸಭೆಯಲ್ಲಿ ಪಾಲ್ಗೊಂಡ ಮುಖಂಡರು. ಸುರೇಶಗೌಡ ಪಾಟೀಲ, ದಿಲೀಪ ಶಿವಶರಣ, ಲಾಲಸಾಹೇಹ ನದಾಫ್ ಇತರರಿದ್ದರು.
Published on

ಧೂಳಖೇಡ: ಬಸವ ವಸತಿ ಯೋಜನೆಯಡಿ ಸರ್ಕಾರದಿಂದ ಹೆಚ್ಚುವರಿ 300 ಮನೆಗಳು ಧೂಳಖೇಡ ಗ್ರಾಪಂಗೆ ಮಂಜೂರಾಗಿದ್ದು, ವಸತಿ ರಹಿತ ಅರ್ಹ ಫಲಾನುಭವಿಗಳು ಗ್ರಾಪಂಗೆ ಬಂದು ಅರ್ಜಿ ಸಲ್ಲಿಸಬಹುದು ಎಂದು ಗ್ರಾಪಂ ಸದಸ್ಯ ಸುರೇಶಗೌಡ ಪಾಟೀಲ ಹೇಳಿದರು.

ಗ್ರಾಮದ ಸಮುದಾಯ ಭವನದಲ್ಲಿ ಶನಿವಾರ ನಡೆದ ವಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ತೆಗೆದುಕೊಂಡು ವಾರ್ಡ್ ಸಭೆಗಳು ಮುಗಿದ ನಂತರ ಶಾಸಕರ ನೇತೃತ್ವದಲ್ಲಿ ಅರ್ಹ ವಸತಿ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಗ್ರಾಪಂ ಕಾರ್ಯಾಲಯಕ್ಕೆ ಬಂದು ಅರ್ಜಿ ಸಲ್ಲಿಸಬಹುದು ಎಂದರು.

ಇದೇ ವೇಳೆ ಗ್ರಾಮಸ್ಥರು ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ಸಮುದಾಯ ಭವನ ಸುತ್ತ-ಮುತ್ತ ಸ್ವಚ್ಛತೆ, ಚರಂಡಿ ಸುಧಾರಣೆ, ರಸ್ತೆ ಮೇಲೆ ಜೆಜೆಎಂ ನೀರಿನಿಂದ ಅವ್ಯವಸ್ಥೆ ಸರಿಪಡಿಸುವುದು, ಮುಸ್ಲಿಂ ಸಮುದಾಯದ ಸ್ಮಶಾನ ಅಭಿವೃದ್ಧಿ, ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಲಕ್ಷ್ಮೀನಾಥ ದೇವಸ್ಥಾನ ಹತ್ತಿರ ಚರಂಡಿಗೆ ಪೈಪ್ ಅಳವಡಿಕೆ, ಗ್ರಾಮದ ಸುತ್ತಮುತ್ತ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ಗ್ರಾಪಂ ಅಧ್ಯಕ್ಷ ದಿಲೀಪ ಶಿವಶರಣ, ಪಿಡಿಒ ಲಾಲಸಾಹೇಹ ನದಾಫ್, ಶಂಕರ ಭೈರಗೊಂಡ, ಅನೀಲ ಕೊಡತೆ, ಶ್ರೀಶೈಲ ನಿಲೂರೆ, ಮಲ್ಲಿಕಾರ್ಜುನ ನಗರೆ, ಭೀಮಾಶಂಕರ ಭೈರಗೊಂಡ, ಹಣಮಂತ ಧೂಳಖೇಡಕರ, ಶ್ರೀಮಂತ ಭೈರಗೊಂಡ, ದಯಾನಂದ ಪಾಟೀಲ, ಸದಾಶಿವ ಕಾಂಬಳೆ, ರಾಜಕುಮಾರ ಕಾಳೆ, ರೇವಣ್ಣಸಿದ್ದ ಭಂಡರೆ, ಬದೇನವಾಜ ಮುಲ್ಲಾ, ಚಂದ್ರಕಾಂತ ನಗರೆ, ರಮೇಶ ಬೆಳ್ಳೆನವರ, ಪರಮೇಶ್ವರ ತಳವಾರ, ರಾಯಗೊಂಡ ರಗಟೆ ಇತರರಿದ್ದರು.

ಗ್ರಾಪಂಗೆ ಮನೆಗಳು ಮಂಜೂರಾಗಿ ಬಹಳ ದಿನ ಕಳೆದಿದ್ದು, ಇದರ ಬಗ್ಗೆ ಸಾರ್ವಜನಿಕರಿಗೆ ಈಗ ತಿಳಿಸಲಾಗುತ್ತಿದೆ. ಬಡವರಿಗೆ ಪಾದರ್ಶಕವಾಗಿ ಮನೆಗಳ ಹಂಚಿಕೆಯಾಗಬೇಕು. ಮನೆಗಳು ಮಂಜೂರುಗಿರುವುದು ವಾರ್ಡ್ ಸಭೆಯ ಮೂಲಕ ಗೊತ್ತಾಗಿದೆ. ಅರ್ಜಿ ಸಲ್ಲಿಸಲು ಕೆಲವು ಫಲಾನುಭವಿಗಳ ಹತ್ತಿರ ಕೆಲವು ದಾಖಲಾತಿಗಳು ಇರುವುದಿಲ್ಲ. ಅದಕ್ಕಾಗಿ ಕಾಲಾವಕಾಶ ನೀಡಬೇಕು.

ರಮೇಶ ಬೆಳ್ಳೆನವರ, ರಾಯಗೊಂಡ ರಗಟೆ, ಧೂಳಖೇಡ ಗ್ರಾಮಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net