ಕೆ.ಆರ್.ಪೇಟೆ ಪಟ್ಟಣದಲ್ಲಿ ಆರ್.ಧ್ರುವನಾರಾಯಣಗೆ ಸಂತಾಪ

Krp
Published on

ಕೆ.ಆರ್.ಪೇಟೆ: ಸತತ ಪರಿಶ್ರಮ, ಬದ್ಧತೆ ಮತ್ತು ಪ್ರಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆ.ಧ್ರುವನಾರಾಯಣ ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯರಾಮೇಗೌಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧ್ರುವನಾರಾಯಣ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ದುರಂತ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಿನಲ್ಲಿ ಇರುತ್ತದೆ ಎಂದರು.

ತಾಲೂಕು ಕಾಂಗ್ರೆಸ್ ಯುವಘಟಕದ ಅಧ್ಯಕ್ಷ ಮಹೇಂದ್ರ, ತಾಪಂ ಮಾಜಿ ಸದಸ್ಯ ಮಧುಸೂದನ್, ಪುರಸಭೆ ಸದಸ್ಯ ಪ್ರೇಮಕುಮಾರ್, ಮುಖಂಡ ರಾಜಣ್ಣ, ಅಗ್ರಹಾರ ಬಾಚಹಳ್ಳಿ ಕುಮಾರ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net