

ಮೈಸೂರೂ: ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಆಫ್ ಮೈಸೂರು ವತಿಯಿಂದ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಭಾನುವಾರ ಮೈ ನವಿರೇಳಿಸುವ ‘ಗ್ರಾವೆಲ್ಫೆಸ್ಟ್ ಆಟೋಕ್ರಾಸ್ ರೇಸ್’ನಲ್ಲಿ ಬೆಂಗಳೂರಿನ ಧ್ರುವ ಚಂದ್ರಶೇಖರ್ ಮೈಸೂರು ಗ್ರಾವೆಲ್ ಕಿಂಗ್-2023 ಮುಡಿಗೇರಿಸಿಕೊಂಡರು.
ಗ್ರಾವೆಲ್ಫೆಸ್ಟ್ ಆಟೋಕ್ರಾಸ್ ರೇಸ್‌ನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರ, ತಮಿಳುನಾಡು ಮತ್ತು ಕೇರಳದ 95 ಖ್ಯಾತ ಚಾಲಕರು ಪಾಲ್ಗೊಂಡು ಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಮಿಂಚಿನ ವೇಗದಲ್ಲಿ ಕಾರುಗಳನ್ನು ಚಾಲಿಸುವ ಮೂಲಕ ಸಾಹಸ ಪ್ರದರ್ಶಿಸಿದರು. ಡೆನ್ ತಿಮ್ಮಯ್ಯ, ಚೇತನ್ ಶಿವರಾಮ್, ಜಾಹನ್ ಗಿಲ್, ಎಂ. ಡೀನ್, ಪ್ರಗತಿ ಗೌಡ, ನಿಕಿತಾ ತಕಲೆ ಸೇರಿದಂತೆ ದೇಶದ ಅಗ್ರಮಾನ್ಯ ಆಟೋಕ್ರಾಸ್ ರೇಸ್ ಪಟುಗಳು ಪಾಲ್ಗೊಂಡಿದ್ದರು. 10 ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿ ಸಾಹಸ ಪ್ರದರ್ಶಿಸಿದರು.
ಮೈಸೂರು ಗ್ರಾವೆಲ್ ಕಿಂಗ್-2023 ಪ್ರಶಸ್ತಿ ಪಡೆದ ಬೆಂಗಳೂರಿನ ಧ್ರುವ ಚಂದ್ರಶೇಖರ್‌ಗೆ ಟ್ರೋಫಿಯೊಂದಿಗೆ ಎರಡು ಲಕ್ಷ ನಗದು ಬಹುಮಾನ ಹಾಗೂ ಬೆಳ್ಳಿಯ ಟ್ರೋಫಿ ನೀಡಲಾಯಿತು. ಧ್ರುವ ಚಂದ್ರಶೇಖರ್ ಎರಡು ಕಿ.ಮೀ. 2 ಅನ್ನು ಕೇವಲ ನಿಮಿಷ 19 ಸೆಕೆಂಡ್‌ನಲ್ಲಿ ಪೂರ್ಣಗೊಳಿಸಿದರು.
ಇದೇ ಪ್ರಥಮ ಬಾರಿಗೆ ಒಂದೇ ಜಾಗದಲ್ಲಿ ಆಟೋಕ್ರಾಸ್ ರೇಸ್‌ಗೆ 2 ಕಿ.ಮೀ.ನ ಡಬಲ್ ಟ್ರಾೃಕ್ ಲ್ಯಾಪ್ ಸಿದ್ಧಪಡಿಸಲಾಗಿತ್ತು. ಹೀಗಾಗಿ ಇಬ್ಬರು ಸ್ಪರ್ಧಿಗಳು ಒಂದೇ ಬಾರಿಗೆ ಮಿಂಚಿನ ವೇಗದಲ್ಲಿ ಕಾರು ಚಾಲಿಸುವ ನಯನ ಮನಹೋರ ದೃಶ್ಯವನ್ನು ಜನರು ಕಣ್ತುಂಬಿಕೊಳ್ಳಲು ಸಾಧ್ಯವಾಯಿತು.