ನಾಡಿಗೆ ಮಾದರಿಯಾದ ಧೋಂಗಡೆ

14 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಂಧರ ಶಿಣಕ್ಕೆ ಬಹುದೊಡ್ಡ ಸೇವೆ ಸಲ್ಲಿಸಿದವರು ರಾಮಚಂದ್ರ ಧೋಂಗಡೆ. 95ರ ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹದೊಂದಿಗೆ ಸಾಹಿತ್ಯಿಕ, ಸಾಂಸತಿಕವಾಗಿ ತೊಡಗಿಸಿಕೊಂಡು ಧಾರವಾಡದ ಜನತೆಗೆ ಮಾದರಿಯಾಗಿದ್ದಾರೆ ಎಂದು ಹಿರೇಮಲ್ಲೂರ ಈಶ್ವರನ್​ ಕಾಲೇಜಿನ ಪ್ರಾಚಾರ್ಯ ಪ್ರೊ. ಶಶಿಧರ ತೋಡಕರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ರಾಮಚಂದ್ರ ಧೋಂಗಡೆ ಅವರ ಚಿಂತನ ಚಿಲುಮೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಾಹಿತ್ಯ ೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅಂಧರಿಗೆ ಬಸವಣ್ಣ, ಅಲ್ಲಮಪ್ರಭು ವಚನಗಳನ್ನು ಬೆಲ್​ ಲಿಪಿಯಲ್ಲಿ ರಚಿಸಿ ನೀಡಿದ್ದಲ್ಲದೆ, ಅವರಿಗೆ ಗ್ರಂಥಾಲಯ ಪ್ರಾರಂಭಿಸಿದರು. ಅಂಧರಿಗಾಗಿ ಸಾಹಿತ್ಯಿಕ ಪತ್ರಿಕೆ ನಡೆಸಿ ಇಡೀ ನಾಡಿಗೆ ಮಾದರಿಯಾಗಿದ್ದಾರೆ ಎಂದರು.
ಡಾ. ಚಂದ್ರಶೇಖರ ರೊಟ್ಟಿಗವಾಡ ಮಾತನಾಡಿ, ಮಾದರಿ ವ್ಯಕ್ತಿತ್ವ ಹೊಂದಿದ ರಾಮಚಂದ್ರ, ಕಷ್ಟಗಳ ಮಧ್ಯೆ ಜೀವನ ರೂಪಿಸಿಕೊಂಡವರು. ಶರಣರ ಹಾಗೂ ಲೌಕಿಕ ಅನುಭವಗಳೇ ಅವರ ಬರವಣಿಗೆಯ ಮೂಲ ಬೇರು. ಆಶಾವಾದಿಯಾಗಿರುವ ಅವರ ಬರವಣಿಗೆಯಲ್ಲಿ ನಿರಾಸೆಯ ಮನಸ್ಥಿತಿ ತೋರ್ಪಡಿಸಿದವರಲ್ಲ. ಬರವಣಿಗೆಯಲ್ಲಿ ಅರ್ಥವಂತಿಕೆ, ಮೌಲ್ಯಯುತ ಮಾತುಗಳಿವೆ ಎಂದರು.
ಕೃತಿ ಕರ್ತ ರಾಮಚಂದ್ರ ಧೋಂಗಡೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಆರ್​.ಬಿ. ಚಿಲುಮಿ ಮಾತನಾಡಿ, ಅಂಧ ಮಕ್ಕಳಿಗೆ ಬೆಲ್​ ಲಿಪಿ ಮೂಲಕ ಶಿಣ ನೀಡುವಲ್ಲಿ ಶ್ರಮಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಈ ಭಾಗದಲ್ಲಿ ಧೋಂಗಡೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದರು.
ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶ್ರೀನಿವಾಸ ವಾಡಪ್ಪಿ, ನಿಂಗಣ್ಣ ಕುಂಟಿ, ಮಲ್ಲಿಕಾರ್ಜುನ ಚಿಕ್ಕಮಠ, ಬಿ.ಎಸ್​. ಶಿರೋಳ, ಸಿದ್ಧನಗೌಡ ಪಾಟೀಲ, ಡಾ. ಆನಂದ ಪಾಟೀಲ, ಶಿವಾನಂದ ಹೂಗಾರ, ಶಿವಶಂಕರ ಹಿರೇಮಠ, ನರಸಿಂಹ ಪರಾಂಜಪೆ, ಲಿಂಬಣ್ಣದೇವರಮಠ ದಂಪತಿ, ಇತರರು ಇದ್ದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಮಹೇಶ ಹೊರಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net