ತಾಯಿ ಮರಣ ತಪ್ಪಿಸಲು ಆದ್ಯತೆ

CTD Health 08oooooooooooooooo
Published on

ಚಿತ್ರದುರ್ಗ:ವಿಶೇಷ ಸಂದರ್ಭಗಳಲ್ಲಿ ಗರ್ಭಪಾತ ಮಾಡುವ ಸಂದರ್ಭ ಶೇ.8ರಷ್ಟು ತಾಯಿ ಮರಣ ಸಂಭವಿಸುತ್ತಿದೆ. ಇದನ್ನು ತಪ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಡಿಎಚ್‌ಒ ಡಾ.ಆರ್.ರಂಗನಾಥ್ ಹೇಳಿದರು.

ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುರಕ್ಷಿತ ವೈದ್ಯಕೀಯ ಗರ್ಭಪಾತ ನಿರ್ವಹಣೆ ತಿದ್ದುಪಡಿ ಕಾಯ್ದೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಪ್ರಸೂತಿ ತಜ್ಞರು, ಶುಶ್ರೂಷಕ ಅಧಿಕಾರಿಗಳು, ಸಿಬ್ಬಂದಿ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ನೂರಕ್ಕೆ ಅರ್ಧದಷ್ಟು ಸುರಕ್ಷಿತವಲ್ಲದ ಗರ್ಭಪಾತಗಳಾಗುತ್ತಿದ್ದು, ತರಬೇತಿ ಪಡೆದ ನುರಿತ ವೈದ್ಯರು ಮಾತ್ರ ಗರ್ಭಪಾತ ಮಾಡುವುದು ಒಳಿತು. ಇದರಿಂದ ದರೆ ತಾಯಿ ಮರಣ ಹೊಂದುವುದನ್ನು ತಡೆಯಲು ಸಾಧ್ಯವಿದೆ ಎಂದು ಹೇಳಿದರು.

ಅನಿವಾರ್ಯ ಮತ್ತು ಅವಶ್ಯಕ ಸಂದರ್ಭದಲ್ಲಿ ಸುರಕ್ಷಿತ ಗರ್ಭಪಾತ ಮಾಡಲು ಈ ತರಬೇತಿ ನೀಡಲಾಗುತ್ತಿದೆ. ಕಾನೂನಾತ್ಮಕವಾಗಿ ವಿಶೇಷ ಸಂದರ್ಭಗಳಲ್ಲಿ ಮಹಿಳೆಯರಿಗೆ 20 ವಾರದ ತನಕ ಗರ್ಭಪಾತ ಮಾಡಲು ಅವಕಾಶವಿದ್ದು, ನೂತನ ತಿದ್ದುಪಡಿಯಡಿ 24 ವಾರಗಳವರೆಗೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ.ರೇಣುಪ್ರಸಾದ್, ತಜ್ಞ ವೈದ್ಯರಾದ ಡಾ.ತೋಯಿಜಾಕ್ಷಿ ಬಾಯಿ, ಡಾ.ಲತಾ, ಡಾ.ಮಲ್ಲಪ್ಪ, ಹಿರಿಯ ಸಂಯೋಜಕ ದೊಡ್ಡನಗೌಡ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net