ಕರ ವಸೂಲಾತಿಯಲ್ಲಿ ಢವಳಗಿ ಪ್ರಥಮ ಸ್ಥಾನ

Dhawalagiri ranks first in tax collection
ಕರ ವಸೂಲಾತಿ ಅಭಿಯಾನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪಂಚಾಯಿತಿ ಆಡಳಿತ ಮಂಡಳಿಯಿಂದ ಸೋಮವಾರ ಸನ್ಮಾನಿಸಲಾಯಿತು. ದಾಕ್ಷಾಯಿಣಿ ಮೇಲಿನಮನಿ, ರಾಮನಗೌಡ ಬಿರಾದಾರ, ಶಾಂತಮ್ಮ ಜಮದರಖಾನಿ, ವಿನೋದ ಕೊಣ್ಣೂರ, ಮಲ್ಲವ್ವ ನಾಗರಾಳ ಮತ್ತಿತರರಿದ್ದಾರೆ.
Published on

ಢವಳಗಿ: ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಪಂಚಾಯಿತಿ ಸಂಗ್ರಹಿಸುವ ಕರವು ಗ್ರಾಮದ ಅಭಿವೃದ್ಧಿಗೆ ಪ್ರಮುಖ ಆದಾಯದ ಮೂಲವಾಗಿದೆ. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಂಡ ಕರ ವಸೂಲಾತಿ ಅಭಿಯಾನದಲ್ಲಿ ಅತಿ ಹೆಚ್ಚು ಕರ ಸಂಗ್ರಹಿಸಿ ಢವಳಗಿ ಗ್ರಾಮ ಪಂಚಾಯಿತಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವಲ್ಲಿ ಸಿಬ್ಬಂದಿ ಪಾತ್ರ ಅಪಾರ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶಗೌಡ ಪಾಟೀಲ ಹೇಳಿದರು.

ಕರ ವಸೂಲಾತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ನೀಡಿದ ಗುರಿಗಿಂತಲೂ ಹೆಚ್ಚಿನ ಸಾಧನೆ ಮಾಡಿದ್ದಕ್ಕಾಗಿ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಪ್ರೋತ್ಸಾಹಿಸಬೇಕು ಎಂದರು.

ಪಿಡಿಒ ಆನಂದ ಹಿರೇಮಠ ಹಾಗೂ ಎಸ್‌ಡಿಎ ಎಂ.ಕೆ. ಗುಡಿಮನಿ ಮಾತನಾಡಿ, ಪಂಚಾಯಿತಿ ಸಿಬ್ಬಂದಿಯನ್ನು ತಂಡದ ರೂಪದಲ್ಲಿ ವಿಂಗಡಣೆ ಮಾಡಿ, ಪ್ರತಿದಿನವೂ ಜನರ ಮನವೊಲಿಸಿ ಒಟ್ಟು 15.65 ಲಕ್ಷ ರೂ. ಕರ ವಸೂಲಿ ಮಾಡಿದ್ದೇವೆ. ಈ ಕಾರ್ಯಕ್ಕೆ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರ ಸಹಕಾರವೂ ಇದೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯ ದುಂಡಪ್ಪ ಅರಷಣಗಿ, ಮುಖಂಡ ಅರವಿಂದ ಕಾಶಿನಕುಂಟಿ ಮಾತನಾಡಿದರು. ಪಂಚಾಯಿತಿ ಪಿಡಿಒ ಆನಂದ ಹಿರೇಮಠ, ಎಸ್‌ಡಿಎ ಎಂ.ಕೆ. ಗುಡಿಮನಿ, ಸಿಬ್ಬಂದಿ ಮಹಾಂತೇಶ ಯಾಳವಾರ, ಸಂಗಪ್ಪ ಪೂಜಾರಿ, ಮಲ್ಲಪ್ಪ ಕುಂಬಾರ, ಹಣಮಂತ ಢವಳಗಿ, ಬಸಮ್ಮ ನಾಯ್ಕೋಡಿ, ಮುತ್ತಪ್ಪ ರಾಮಥಾಳ, ಶಾಂತಪ್ಪ ಢವಳಗಿ, ಶಾಂತಪ್ಪ ಹರಿಜನ, ರೇಷ್ಮಾ ಹರಿಜನ, ಮಡಿವಾಳಪ್ಪ ಗುರಿಕಾರ, ಕಾಶೀಮಸಾ ಬನ್ನೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ ಮೇಲಿನಮನಿ, ಸದಸ್ಯರಾದ ರಾಮನಗೌಡ ಬಿರಾದಾರ, ಶಾಂತಮ್ಮ ಜಮದರಖಾನಿ, ವಿನೋದ ಕೊಣ್ಣೂರ, ಮಲ್ಲವ್ವ ನಾಗರಾಳ, ಆಶಾಬಿ ನದಾ, ಮೈಬೂಬ ಬಾಗವಾನ ನಾಗೇಂದ್ರ ಹಳ್ಳೂರ, ಲಕ್ಷ್ಮೀ ಸುರಪೂರ, ಹಣಮವ್ವ ಹರಿಜನ, ಜಯಶ್ರೀ ಉಪ್ಪಲದಿನ್ನಿ, ಬಸವರಾಜ ಬ್ಯಾಲ್ಯಾಳ, ಮದನಪ್ಪಗೌಡ ಮೇಟಿ, ಶಾಂತಪ್ಪ ಹೊಸಮನಿ, ಗುರುಬಾಯಿ ಕಾಶಿನಕುಂಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net