

ಧಾರವಾಡ: ನಗರದ ಒನ್ ಸ್ಟೇಜ್ ಕ್ರಿಯೇಷನ್ಸ್ ವತಿಯಿಂದ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ನವರಾತ್ರಿ ನಿಮಿತ್ತ ತಪೋವನ ನಗರದ ಯಲಿಗಾರ ಸ್ಪೋರ್ಟ್ಸ್ ಅರೆನಾದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ‘ಧಾರವಾಡ್ಸ್ ದಾಂಡಿಯಾ ದರ್ಬಾರ್’ ಹಾಗೂ ದುರ್ಗಾಪೂಜಾ ಕಾರ್ಯಕ್ರಮ ಜನರ ಗಮನ ಸೆಳೆಯಿತು.
ಯುವತಿಯರು ಡಿಜೆ ಶಬ್ದಕ್ಕೆ ತಕ್ಕಂತೆ ಕೋಲಾಟವಾಡಿ ದಸರಾ ಹಬ್ಬದ ಮೆರುಗು ಹೆಚ್ಚಿಸಿದರು. ಸಾಂಪ್ರದಾಕ ಉಡುಗೆ ತೊಟ್ಟು ಯುವತಿಯರು ಮಿಂಚಿದರು. ಜನರು ಸಹಿತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಹಿಳೆಯರು, ಪುರುಷರು ಹಾಗೂ ಮಕ್ಕಳು ಕಾರ್ಯಕ್ರಮ ನೋಡಿ ಸಂಭ್ರಮಿಸಿದರು.
ಯಲಿಗಾರ ಸ್ಪೋರ್ಟ್ಸ್ ಅರೆನಾ ಮಾಲೀಕರಾದ ಅಭಿಷೇಕ ಯಲಿಗಾರ, ಕಾರ್ಯಕ್ರಮ ಆಯೋಜಕರಾದ ನೀರಜ ಪೋತದಾರ, ಶ್ರೀಹರಿ ಕುಲಕರ್ಣಿ, ಭುವನ ಹುಂಬೇರಿ, ಮೈ ದೇಶ ಪೌಂಡೇಷನ್ ಅಧ್ಯಕ್ಷ ಜಯಗೌಡ ಪಾಟೀಲ ಹಾಗೂ ವಿಷ್ಣು ಹುಕ್ಕೇರಿ ಅವರು ‘ಧಾರವಾಡ್ಸ್ ದಾಂಡಿಯಾ ದರ್ಬಾರ್’ ಯಶಸ್ಸುಗೊಳಿಸಲು ಶ್ರಮಿಸಿದರು.