

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ರಾ.ಯ. ಧಾರವಾಡಕರ ವ್ಯಕ್ತಿತ್ವ ವಿಶಾಲ ಆಲದ ಮರವಿದ್ದಂತೆ. ಅದರಡಿ ಬೆಳೆದ ಅವರ ಶಿಷ್ಯ ಸಂಪತ್ತು ಅಗಾಧವಾದುದು. ಪ್ರಾಮಾಣಿಕತೆ ಮತ್ತು ಮಾನವೀಯ ಹೃದಯ ಶ್ರೀಮಂತಿಕೆ ಅವರ ಬಹುಮುಖ ವ್ಯಕ್ತಿತ್ವದ ಆಯಾಮಗಳಾಗಿದ್ದವು ಎಂದು ಪ್ರೊ. ಹರ್ಷ ಡಂಬಳ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ರಾ.ಯ. ಧಾರವಾಡಕರ ದತ್ತಿ ನಿಮಿತ್ತ ಸೋಮವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ರಾ.ಯ. ಧಾರವಾಡಕರ ವ್ಯಕ್ತಿತ್ವ ಮತ್ತು ಬರಹ ಕುರಿತು ಉಪನ್ಯಾಸ ನೀಡಿದರು.
ಧಾರವಾಡಕರ ಅವರು ಜೆಎಸ್ಎಸ್ ಕಾಲೇಜಿನ ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಅದರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದರು. ಕರ್ನಾಟಕ ವಿಶ್ವ ವಿದ್ಯಾಲಯ, ಕರ್ನಾಟಕ ವಿದ್ಯಾವರ್ಧಕ ಸಂಘಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು. 25ಕ್ಕೂ ಹೆಚ್ಚು ಕನ್ನಡ ಮೌಲಿಕ ಕೃತಿಗಳನ್ನು ರೂಪಿಸಿದ್ದಾರೆ ಎಂದರು.
ಡಾ. ರಾ.ಯ. ಧಾರವಾಡಕರ ಪುತ್ರ ಅನಿಲ ಧಾರವಾಡಕರ ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅಧ್ಯತೆ ವಹಿಸಿದ್ದರು.
ಶಂಕರ ಹಲಗತ್ತಿ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ಸುಜಾತಾ ಧಾರವಾಡಕರ, ಮನೋಜ ಪಾಟೀಲ, ಹ.ವೆಂ. ಕಾಖಂಡಕಿ, ಡಾ. ಮಾರ್ಕಂಡೇಯ ದೊಡಮನಿ, ಮಹಾಂತೇಶ ನರೇಗಲ್, ಎಸ್.ಬಿ. ಗುತ್ತಲ, ಸೀತಾರಾಮ ಶೆಟ್ಟಿ, ಎಸ್.ಕೆ. ಕುಂದರಗಿ, ವೆಂಕಟೇಶ ದೇಸಾಯಿ, ಸಿ.ಜಿ. ಹಿರೇಮಠ, ರಮೇಶ ನಾಡಗೀರ, ಸುರೇಶ ಹೊರಕೇರಿ, ಚಂದ್ರಶೇಖರ ಅಮೀನಗಡ, ಇತರರು ಇದ್ದರು.
ಸತೀಶ ತುರಮರಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.