ಇಂಟರ್ ಸ್ಕೂಲ್ ಸ್ಕೇಟಿಂಗ್ ಸ್ಪರ್ಧೆ

IMG-20230827-WA0031-2.jpg
Published on

ಹುಬ್ಬಳ್ಳಿ: ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಹಾಗೂ ಶ್ರೀ ಚನ್ನಬಸವೇಶ್ವರ ಎಜ್ಯುಕೇಶನ್ ಸೊಸೈಟಿ ಸಹಯೋಗದಲ್ಲಿ ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿ ಭಾನುವಾರ ಇಂಟರ್ ಸ್ಕೂಲ್ ಸ್ಕೇಟಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು.

ಅವಳಿನಗರ ಸೇರಿ ವಿವಿಧೆಡೆಯಿಂದ ಹಲವು ಶಾಲೆಗಳ ಮಕ್ಕಳು ಸ್ಪರ್ಧೆಗೆ ಆಗಮಿಸಿದ್ದರು. ಇಂದಿರಾ ಗಾಜಿನ ಮನೆ ಆವರಣದ ಸ್ಕೇಟಿಂಗ್ ರಿಂಕ್ ನಲ್ಲಿ ಸ್ಪರ್ಧೆಗಳು ನಡೆದವು.

ವಿವಿಧ ವಯೋಮಾನದ ಆಧಾರದಲ್ಲಿ ಐದು ವರ್ಷದಿಂದ 17 ವರ್ಷದ ಒಳಗಿನ ಮಕ್ಕಳಿಗೆ ಸ್ಪರ್ಧೆಗಳು ಜರುಗಿದವು. ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net