ಧಾರವಾಡವು ಶಿಕ್ಷಣದೊಂದಿಗೆ ಸಂಗೀತ, ಸಾಹಿತ್ಯದ ಕಾಶಿ ಆಗಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು

Screenshot_2025-08-29-18-04-53-57.jpg
Published on

ಧಾರವಾಡ: ಜಿಲ್ಲೆಯು ಸಂಗೀತ, ಸಾಹಿತ್ಯ, ಚಿತ್ರಕಲೆ ಮತ್ತು ನಾಟಕ, ವೃತ್ತಿ ರಂಗಭೂಮಿ ಕ್ಷೇತ್ರದ ಕಾರ್ಯಕ್ರಮಗಳನ್ನು ಎಲ್ಲ ಟ್ರಸ್ಟ್ ಗಳ ಸಮನ್ವದಿಂದ ಸಂಘಟಿಸುವ ಮೂಲಕ ಜಿಲ್ಲೆಯ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಹೆಚ್ಚಿಸುವ ಮಹತ್ವದ ಜವಾಬ್ದಾರಿ ಎಲ್ಲ ರಾಷ್ಟ್ರೀಯ ಟ್ರಸ್ಟ್ ಗಳದ್ದಾಗಿದೆ. ಧಾರವಾಡ ಶಿಕ್ಷಣದೊಂದಿಗೆ ಸಂಗೀತ, ಸಾಹಿತ್ಯದ ಕಾಶಿ ಆಗಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಧಾರವಾಡ ಜಿಲ್ಲೆಯ ರಾಷ್ಟ್ರೀಯ ಸ್ಮಾರಕ ಟ್ರಸ್ಟಗಳಿಗೆ ಸರಕಾರದಿಂದ ನೂತನವಾಗಿ ನೇಮಕವಾಗಿರುವ ಅಧ್ಯಕ್ಷ, ಸದಸ್ಯರಿಗೆ ಜಿಲ್ಲಾಡಳಿತದ ಪರವಾಗಿ ಸತ್ಕರಿಸಿ, ಅಭಿನಂದಿಸಿ ಮಾತನಾಡಿದರು. ರಾಜ್ಯದ ಇತರ ಜಿಲ್ಲೆಗಳಿಗೆ, ಬೇರೆ ರಾಜ್ಯಗಳಿಗೆ ಹೊಲಿಸಿದರೆ ಧಾರವಾಡ ಜಿಲ್ಲೆ ನಿಜ ಅರ್ಥದಲ್ಲಿ ಇದು ಸಾಂಸ್ಕøತಿಕ ನಗರಿ ಆಗಿದೆ. ಇಲ್ಲಿ ರಾಷ್ಟ್ರಮಟ್ಟದ ಕೀರ್ತಿಗಳಿಸಿರುವ ಸಂಗೀತ, ಸಾಹಿತ್ಯ, ಚಿತ್ರಕಲೆ, ನಾಟಕ, ವೃತ್ತಿರಂಗಭೂಮಿ ಸಾಧಕರಿದ್ದಾರೆ. ಅವರ ಸಾಧನೆಯ ಸ್ಮರಣೆಗಾಗಿ ಮತ್ತು ಅವರ ಪರಂಪರೆಯನ್ನು ಮುಂದುವರಿಸಲು ರಾಜ್ಯ ಸರಕಾರವು ಅನೇಕ ವರ್ಷಗಳ ಹಿಂದೆ ರಾಷ್ಟ್ರಮಟ್ಟದ ಸ್ಮಾರಕ ಟ್ರಸ್ಟಗಳನ್ನು ರಚಿಸಿ, ಕಾರ್ಯೋನ್ಮುಕವಾಗಿದೆ ಎಂದು ಅವರು ಹೇಳಿದರು.

ಸಂಗೀತ, ಸಾಹಿತ್ಯದ ಪರಂಪರೆಯನ್ನು ಯುವ ಪಿಳಿಗೆಗೆ ಮುಂದುವರಿಸಲು ಟ್ರಸ್ಟಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರೋತ್ಸಾಹಿಸಬೇಕು. ಎಲ್ಲ ಟ್ರಸ್ಟಗಳು ಒಂದೇ ವೇದಿಕೆಯಡಿ ಕೂಡಿ, ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಬೇಕು. ಜಿಲ್ಲಾಡಳಿತ ಅಗತ್ಯ ನೆರವು ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜನರಿಗೆ ಮಾನಸಿಕ ನೆಮ್ಮದಿ ನೀಡುವ ಸಂಸ್ಕೃತಿ ಬೆಳೆಸುವ ಕಾರ್ಯವಾಗಬೇಕು. ಈಗಾಗಲೇ ವಿವಿಧ ಟ್ರಸ್ಟ್‌ ಅಗತ್ಯತೆಯ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲಿ ಕಲಾಭವನ ಸಾರ್ವಜನಿಕ ಬಳಕೆ ಮುಕ್ತಗೊಳಿಸಲು ಕ್ರಮವಹಿಸಲಾಗುತ್ತದೆ. ಕಲಾಭವನ ಆವರಣದಲ್ಲಿ ನಿಲ್ಲುತ್ತಿದ್ದ ತಾಜ್ಯ ಸಂಗ್ರಹ ವಾಹನಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಅವರು ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ ಅಧ್ಯಕ್ಷ ಡಾ. ಸರಜೂ ಕಾಟ್ಕರ್, ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರ, ಡಾ. ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟನ್ ಅಧ್ಯಕ್ಷ ಪಂಡಿತ ಕೈವಲ್ಯಕುಮಾರ ಗುರವ, ಡಿ.ವ್ಹಿ. ಹಾಲಭಾವಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ.ಮಾರುತಿ, ರಂಗಾಯಣ ದ ನಿರ್ದೇಶಕ ರಾಜು ತಾಳಿಕೋಟಿ ಹಾಗೂ ವಿವಿಧ ರಾಷ್ಟ್ರೀಯ ಟ್ರಸ್ಟಗಳ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅವರನ್ನು ಸತ್ಕರಿಸಿ, ಅಭಿನಂದಿಸಿದರು.

ಅಭಿನಂದನೆ ಸ್ವಿಕರಿಸಿದ ಟ್ರಸ್ಟಗಳ ಅಧ್ಯಕ್ಷರು ಹಾಗೂ ಸದಸ್ಯರಾದ ಹನುಮಾಕ್ಷಿ ಗೋಗಿ, ಡಾ. ಶರಣಮ್ಮ ಗೊರೆಬಾಳ, ನಿಜಗುಣಿ ರಾಜಗುರು ಅವರು ಮಾತನಾಡಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ವಂದಿಸಿದರು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿದರು.

ಅಭಿನಂದನಾ ಕಾರ್ಯಕ್ರಮದಲ್ಲಿ ವಿವಿಧ ಟ್ರಸ್ಟಗಳ ಸದಸ್ಯರು, ಸಂಗೀತಾಸಕ್ತರು, ಸಾಹಿತ್ಯಾಭಿಮಾನಿಗಳು ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net