ಧಾರವಾಡ ಸಾಂಸ್ಕೃತಿಕ ಪರಂಪರೆ ನಗರವಾಗಲಿ

18 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡವನ್ನು ಸಾಂಸ್ಕೃತಿಕ ಪರಂಪರೆ ನಗರ ಎಂದು ಸರ್ಕಾರ ಘೋಷಣೆ ಮಾಡಬೇಕು ಎಂದು ಸಾಹಿತಿ ಡಾ. ಕೃಷ್ಣ ಕಟ್ಟಿ ಹೇಳಿದರು.

ನಗರದ ಜಿ.ಬಿ. ಜೋಶಿ ಮೆಮೋರಿಯಲ್​ ಟ್ರಸ್ಟ್​ ಸಹಯೋಗದಲ್ಲಿ ಪಂ. ನಾರಾಯಣರಾವ ಮುಜುಂದಾರ ಸ್ಮತಿ ಸಂಗೀತ ಸಭಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪಂ. ನಾರಾಯಣರಾವ ಮುಜುಂದಾರ ಹಾಗೂ ಪಂ. ಸುಧೀಂದ್ರ ಮುಜುಂದಾರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತ್ಯ, ಸಂಗೀತ, ಕಲೆ ಹೀಗೆ ಸಂಸ್ಕೃತಿ ಪರಂಪರೆ ಶ್ರೀಮಂತಗೊಳಿಸಿದ್ದು ಧಾರವಾಡ. ಹೀಗಾಗಿ ಸರ್ಕಾರ ಧಾರವಾಡವನ್ನು ಸಾಂಸ್ಕೃತಿಕ ಪರಂಪರೆ ನಗರ ಎಂದು ಘೋಷಿಸಿ ನಗರದ ಮೆರಗು ಇನ್ನಷ್ಟು ಹೆಚ್ಚಿಸಬೇಕು. ನಾರಾಯಣರಾವ ಮುಜುಂದಾರ ಅವರಂತಹ ಹಲವು ಕಲಾವಿದರು ಗುರುಕುಲ ಪದ್ಧತಿಯಲ್ಲಿ ವಿದ್ಯೆ ನೀಡಿ ಅನೇಕ ಶಿಷ್ಯರನ್ನು ರೂಪಿಸಿದ್ದಾರೆ. ಬಡತನ ಅನುಭವಿಸಿದರೂ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಶಿಷ್ಯರು ಈ ಸಂಗೀತ ನಂದಾದೀಪವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ಡಾ. ಹ.ವೆಂ. ಕಾಖಂಡಿಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಂ. ನಾರಾಯಣ ಮುಜುಂದಾರ ಬಡತನದ ಬದುಕಿನಲ್ಲೂ ಶಿಷ್ಯರಿಗೆ ವಿದ್ಯೆ ಧಾರೆ ಎರೆದ ಮಹಾನುಭಾವರು. ಗುರುಕುಲ ಪದ್ಧತಿಯಲ್ಲಿ ಬೋಧನೆ ಮಾಡಿದ ಅವರು ಶಿಷ್ಯರನ್ನು ರೂಪಿಸುತ್ತಿದ್ದ ರೀತಿ ಅನನ್ಯವಾಗಿತ್ತು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ಮುಜುಂದಾರ, ಡಾ. ಶ್ರೀನಿವಾಸ ಕಲ್ಲಾಪುರ, ಡಾ.ಅರವಿಂದ ಯಾಳಗಿ, ಡಾ.ಎಂ.ಎಸ್​. ಪಾಟೀಲ, ಡಾ. ವಾದಿರಾಜಾಚಾರ್ಯ ತಡಕೋಡ, ಅಶೋಕ ಸೋನಕರ, ಕೆ.ಬಿ. ಬಳ್ಳೂರ, ಇತರರು ಇದ್ದರು.

ನಂತರ ಉಷಾ ಕುಲಕರ್ಣಿ, ವಿನಯ ಮುಜುಂದಾರ, ರಶ್ಮಿ ಕಾಖಂಡಿಕಿ, ರಾಧಿಕಾ ಕಾಖಂಡಿಕಿ, ಶ್ರುತಿ ಅರ್ಚಕ, ನೂರಜಹಾನ್​ ನದಾಫ್​, ಡಾ. ಮುಕ್ತಾ ಮುಜುಂದಾರ ಸಂಗೀತ ಪ್ರಸ್ತುತಪಡಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಡಿ.ವಿ. ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net