ಉದ್ಯಮಶೀಲ ಮನೋಭಾವ ಇಂದಿನ ಅಗತ್ಯ

18 Dwd 9
Published on

ಧಾರವಾಡ: ಭಾರತವು ಅತ್ಯುತ್ತಮ ತಂತ್ರಜ್ಞರ ಸಮೂಹ ಹೊಂದಿದೆ. ವ್ಯವಸ್ಥಾಪನಾ ಕೌಶಲದೊಂದಿಗೆ ಉದ್ಯಮಶೀಲ ಮನೋಭಾವ ಅಭಿವೃದ್ಧಿಪಡಿಸುವುದು ಇಂದಿನ ಅಗತ್ಯ ಎಂದು ಹುಬ್ಬಳ್ಳಿಯ ಏಬಲ್ ಡಿಸೈನ್ ಇಂಜಿನಿಯರಿAಗ್ ಸರ್ವೀಸಸ್‌ನ ಜಗದೀಶ ಹಿರೇಮಠ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿAಗ್ ಕಾಲೇಜಿನಲ್ಲಿ ಆಯೋಜಿಸಿರುವ ಇನ್‌ಸಿಗ್ನಿಯಾ: ರಾಷ್ಟಿçÃಯ ತಾಂತ್ರಿಕ- ಸಾಂಸ್ಕೃತಿಕ ಉತ್ಸವಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗಾಯಕ ಶ್ರೀಪಾದ ಹೆಗಡೆ ಕಂಪ್ಲಿ ಮಾತನಾಡಿ, ವಿದ್ಯಾರ್ಥಿಗಳು ವೃತ್ತಿ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಎಸ್‌ಡಿಎAಇ ಸೊಸೈಟಿ ಕಾರ್ಯದರ್ಶಿ ಜೀವಂಧರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸಾರ್ವಜನಿಕ ಸಂಪರ್ಕ ಅಽಕಾರಿ ಪ್ರೊ. ವಿ.ಕೆ. ಪರ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿಜಯಾ ಸಿ. ಕಾಲೇಜಿನ ವರದಿ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net