ಧಾರವಾಡ ವಿಜ್ಞಾನ ನಾಟಕೋತ್ಸವ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಅಭಿನಯ ಭಾರತಿ ಸಹಯೋಗದಲ್ಲಿ ನ. 16ರಿಂದ 17ರವರೆಗೆ "ಧಾರವಾಡ ವಿಜ್ಞಾನ ನಾಟಕೋತ್ಸವ-2024' ಹಮ್ಮಿಕೊಳ್ಳಲಾಗಿದೆ.

ನ. 16ರಂದು ಸಂಜೆ 5 ಗಂಟೆಗೆ ಮೈಸೂರಿನ ಅರಿವು ಸಂಸ್ಥೆ ವತಿಯಿಂದ "ಹಸಿರೆ ಹೊನ್ನು' ನಾಟಕ ಪ್ರದರ್ಶನಗೊಳ್ಳಲಿದೆ. ವಿಶ್ರಾಂತ ಕುಲಪತಿ ಡಾ. ಬಿ.ಜಿ. ಮೂಲಿಮನಿ ಕಾರ್ಯಕ್ರಮ ಉದ್ಘಾಟಿಸುವರು. ಡಾ. ಚನ್ನಪ್ಪ ಎ., ಅರವಿಂದ ಕುಲಕರ್ಣಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ನ. 17ರಂದು ಮೈಸೂರಿನ ಅರಿವು ಸಂಸ್ಥೆ ವತಿಯಿಂದ "ಗೆಲಿಲಿಯೋಸ್​ ಡಾಟರ್​' ನಾಟಕ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಡಾ. ಎಂ.ಎಸ್​. ಶಿವಪ್ರಸಾದ, ಶುಭಾಂಗಿ ಮೋರೆ, ಆಗಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net