ಅಯೋಧ್ಯೆ ಯಾಗಕ್ಕೆ ಧಾರವಾಡ ವಿದ್ವಾಂಸ

web 5
Published on

ಧಾರವಾಡ: ಅಯೋಧ್ಯೆಯ ರಾಮಮಂದಿರ ಪ್ರದೇಶದಲ್ಲಿ ಜು. 21ರಿಂದ 28ರವರೆಗೆ ವಿಶ್ವ ಹಿಂದು ಪರಿಷತ್ ವತಿಯಿಂದ ಚತುರ್ವೇದ ಸಂಹಿತಾ ಯಾಗ, ಶ್ರೀಮದ್ ಭಾಗವತ ಹಾಗೂ ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಯಾಗ  ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ನಗರದ ವೈದಿಕ ವಿದ್ವಾಂಸ ಗಿರೀಶ ಶೆಲ್ಲಿಕೇರಿ ಪಾಲ್ಗೊಳ್ಳಲಿದ್ದಾರೆ. ಧಾರ್ಮಿಕ ಕಾರ್ಯಕ್ರಮಕ್ಕೆ ವಿವಿಧೆಡೆಯಿಂದ 40 ವೈದಿಕ ವಿದ್ವಾಂಸರು ತೆರಳಲಿದ್ದಾರೆ. ಶುಕ್ಲ ಯಜುರ್ವೇದದ 3,000 ಶ್ಲೋಕ ಸೇರಿ 1.30 ಲಕ್ಷ ಶ್ಲೋಕಗಳ ಮೂಲಕ ಆಹುತಿ ನೀಡಲಾಗುವುದು. ವಿದ್ವಾಂಸ ಗಿರೀಶ ಅವರು ಶುಕ್ಲ ಯಜುರ್ವೇದ ಶ್ಲೋಕ ಪಠಣ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net