

ಧಾರವಾಡ: ವಿದ್ಯುತ್ ದರ ಏರಿಕೆ ಖಂಡಿಸಿ ಹುಬ್ಬಳ್ಳಿ ಚೇಂಬರ್ ಆ-ï ಕಾಮರ್ಸ್ ಹಾಗೂ ಧಾರವಾಡ ವಾಣಿಜ್ಯೋದ್ಯಮಿಗಳ ಸಂಘ ಗುರುವಾರ ಕರೆ ನೀಡಿದ್ದ ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ವಿವಿಧ ವ್ಯಾಪಾರಸ್ಥರ ಬಂದ್ ಕರೆ ಬೆಂಬಲಿಸಿದ ಅಂಗಡಿಕಾರರು ಬೆಳಗ್ಗೆ ಅಂಗಡಿಗಳನ್ನು ಬಂದ್ ಮಾಡಿದ್ದರು. ಸೂಪರ್ ಮÁರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು. ಸುಭಾಷ ರಸ್ತೆಯ ಮÁರುಕಟ್ಟೆಯ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಕಿರಾಣಿ, ಬಟ್ಟೆ, ಸ್ಟೇಷನರಿ ವ್ಯಾಪಾರ ಬಂದ್ ಆಗಿತ್ತು. ಎಪಿಎಂಸಿ ವ್ಯಾಪಾರ- ವಹಿವಾಟು ಸ್ಥಗಿತಗೊಂಡಿತ್ತು. ಕೆಲ ಹೋಟೆಲ್‌ಗಳು ಎಂದಿನAತೆ ಕಾರ್ಯನಿರ್ವಹಿಸಿದವು. ಬೀದಿಬದಿ ವ್ಯಾಪಾರ ಯಥಾಸ್ಥಿತಿ ಇತ್ತು.
ಬೆಳಗ್ಗೆ ೧೧ ಗಂಟೆಗೆ ಕೆಸಿಸಿ ಬ್ಯಾಂಕ್ ವೃತ್ತದಿಂದ ಪ್ರತಿಭಟನಾ ರ‍್ಯಾಲಿ ಹೊರಟ ವ್ಯಾಪಾರಸ್ಥರು ಜಿಲ್ಲಾಽಕಾರಿ ಕಚೇರಿವರೆಗೆ ತೆರಳಿದರು. ಧಾರವಾಡ ಬೆಳಗಣಿಗೆ ಕೇಂದ್ರ ಉದ್ಯಮಗಳ ಸಂಘ, ಹೋಟೆಲ್- ಬೇಕರಿ ಸಂಘ, ಕೈಗಾರಿಕಾ ಸಂಘಗಳು, ಕಿರಾಣಿ- ಜವಳಿ ವರ್ತಕರು, ಉದ್ಯಮಿಗಳು ಪ್ರತಿಭಟನಾ ಮೆರವಣಿಗೆಗೆ ಸಾಥ್ ನೀಡಿದರು.
ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕೆಗಳು ಮುಚ್ಚುವ ಸಾಧ್ಯತೆ ಇದೆ. ಮಾನವ ಶಕ್ತಿ ಕಡಿಮೆ ಮಾಡುವುದರಿಂದ ನಿರುದ್ಯೋಗ ಹೆಚ್ಚಾಗಲಿದೆ. ಸರ್ಕಾರ ಮಧ್ಯಪ್ರವೇಶಿಸಿ ಕೂಡಲೇ ವಿದ್ಯುತ್ ದರ ಕಡಿಮೆ ಮಾಡಬೇಕು ಎಂದು ಜಿಲ್ಲಾಽಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ವಿನಯ ಜವಳಿ, ಸಂದೀಪ ಬಿಡಸಾರಿಯಾ, ಪ್ರವೀಣ ಅಗಡಿ, ಎಸ್.ಪಿ. ಸಂಶಿಮಠ, ಬಿ.ಎಸ್. ಸತೀಶ. ರಾಜು ಪಾಟೀಲ ಹಾಗೂ ಇತರರಿದ್ದರು.