ಲೋಕ ಅದಾಲತ್‌ನಲ್ಲಿ 3.04 ಲಕ್ಷ ರೂ. ಪರಿಹಾರ ನಿಗದಿ

web 66
Published on

ಧಾರವಾಡ: ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಾರದ ಲೋಕ ಅದಾಲತ್‌ನಲ್ಲಿ 4 ದೂರು ಪ್ರಕರಣಗಳು ಮತ್ತು ಈಗಾಗಲೇ ಆದೇಶ ಜಾರಿಯಾದ 3 ಪ್ರಕರಣಗಳನ್ನು ಸಂಧಾನದ ಮೂಲಕ ರಾಜಿ ಮಾಡಿಸಲಾಯಿತು. ಈ ಪ್ರಕರಣಗಳಲ್ಲಿ 3.04 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಿ ಇತ್ಯರ್ಥಗೊಳಿಸಲಾಯಿತು. ಉಪಭೋಕ್ತಾ ಲೋಕ್ ಅದಾಲತ್‌ನ ನೇತೃತ್ವವನ್ನು ಆಯೋಗದ ಜಿಲ್ಲಾ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net