ಧಾರವಾಡದ ವೈದ್ಯೆಗೆ ವಂಚನೆ

cybe crime
Published on

ಹುಬ್ಬಳ್ಳಿ: ಪ್ಲಾೃನೆಟ್ ಇಮೇಜ್ ಅಂತಾರಾಷ್ಟ್ರೀಯ ಕಂಪನಿಯ ಐಪಿಒನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿದ ಸೌರಭ ಮುಖರ್ಜಿ ಮತ್ತು ಬೆಲಿಂದಾ ಎನ್ನುವವರು, ಧಾರವಾಡ ಗಿರಿನಗರದ ವೈದ್ಯೆಯೊಬ್ಬರಿಂದ 88.65 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ವಾಟ್ಸ್ ಆ್ಯಪ್ ಮೂಲಕ ವೈದ್ಯೆಯನ್ನು ಸಂಪರ್ಕಿಸಿದ ವಂಚಕರು, ಲಾಭದಾಸೆ ತೋರಿಸಿದ್ದಾರೆ. ಇದಾದ ಮೇಲೆ ವಾಟ್ಸ್ ಆ್ಯಪ್ನ್‌ಲ್ಲಿ ಆ್ಯಂಟ್ ರಿಟೇಲ್ ಇನ್‌ವೆಸ್ಟರ್ ಅಲೈನ್ಸ್ ಕ್ಲಬ್ 222 ಗ್ರೂಪ್‌ಗೆ ಸಂಬಂಧಿಸಿದ ಲಿಂಕ್ ಕಳಹಿಸಿ ಸದಸ್ಯರನ್ನಾಗಿ ಮಾಡಿದ್ದಾರೆ. ನಂತರ ವಿವಿಧ ಖಾತೆಗಳಿಂದ ಒಟ್ಟು 88.65 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ವೈದ್ಯೆ ಸಿಇಎನ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net