

ಧಾರವಾಡ: ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ದೈಹಿಕವಾಗಿ ಸದೃಢರಾಗಿ ಇರಬೇಕು. ಅದಕ್ಕೆ ಕ್ರೀಡಾಕೂಟಗಳು ಸಹಕಾರಿ ಎಂದು ಕೆವಿಜಿ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಹೇಳಿದರು.
ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಧಾರವಾಡ ಜರ್ನಲಿಸ್ಟ್ ಗಿ¯್ಡï ಗುರುವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮÁತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಲೋಕೇಶ ಜಗಲಾಸರ್ ಮÁತನಾಡಿ, ಸುದ್ದಿಯ ಒತ್ತಡದಲ್ಲಿ ಇರುವ ಪತ್ರಕರ್ತರು ಒಟ್ಟಿಗೆ ಸೇರಿ ಕ್ರೀಡಾಕೂಟ ಆಯೋಜಿಸಿದ್ದು ಖುಷಿಯ ಸಂಗತಿ. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಇಂಥ ಚಟುವಟಿಕೆಗಳು ಮೇಲಿಂದ ಮೇಲೆ ನಡೆಯುತ್ತಿರಬೇಕು ಎಂದರು.
ಯುವ ವಕೀಲ ಶ್ರೀಕಾಂತ ಕ್ಯಾತಪ್ಪನವರ, ಧಾರವಾಡ ಜರ್ನಲಿಸ್ಟ್ ಗಿ¯್ಡï ಅಧ್ಯಕ್ಷ ಡಾ. ಬಸವರಾಜ ಹೊಂಗಲ್, ಸದಸ್ಯರಾದ ನಿಜಗುಣಿ ದಿಂಡಲಕೊಪ್ಪ, ಮಂಜುನಾಥ ಅಂಗಡಿ, ಬಸವರಾಜ ಹಿರೇಮಠ, ಮಲ್ಲಿಕಾರ್ಜುನ ಬಾಳನಗೌಡರ, ರಾಯಸಾಬ ಅನಸರಿ, ರವಿಕುಮÁರ ಕಗ್ಗನವರ, ಸದ್ದಾಂ ಮುಲ್ಲಾ, ಮಹಾಂತೇಶ ಕಣವಿ, ಇತರರಿದ್ದರು.
ಉತ್ತಮ ಜೀವನ ಶೈಲಿ ಮತ್ತು ಪರಿಶುದ್ಧ ಆಹಾರ ಕ್ರಮದಿಂದ ಮÁತ್ರ ಸದೃಢ ಆರೋಗ್ಯ ಸಾಧ್ಯ. ೪೦ ವರ್ಷ ಮೀರಿದ ಎಲ್ಲರೂ ದೈಹಿಕ ಪರಿಶ್ರಮಕ್ಕೆ ಒತ್ತು ನೀಡಲೇಬೇಕು. ಸಕ್ಕರೆ, ಮೈದಾ ಪದಾರ್ಥಗಳಿಂದ ದೂರ ಇದ್ದು, ಸಾವಯವ ಆಹಾರ ಸೇವಿಸಬೇಕು. ಪ್ರತಿಯೊಬ್ಬರೂ ಕ್ರಮಬದ್ಧ ಜೀವನಕ್ರಮ ಅನುಸರಿಸಬೇಕು.