

ಧಾರವಾಡ: ನಗರದ ಜಿಲ್ಲಾ ಲಾನ್ ಟೆನಿಸ್ ಆವರಣದಲ್ಲಿ ಬುಧವಾರ ನಡೆದ ಐಟಿಎಫ್ ಪುರುಷರ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಿನ ಸಿಂಗಲ್ಸೃ್ನಲ್ಲಿ ಅಗ್ರ ಶ್ರೇಯಾಂಕಿತ ಆಟಗಾರರು ಪ್ರಿಕ್ವಾರ್ಟರ್ ಫೈನಲ್ಸ ಹಂತಕ್ಕೆ ತಲುಪಿದರು. ಅಮೆರಿಕದ ನಿಕ್ ಚಾಪೆಲ್ ಕೋರಿಯನ್ ಆಟಗಾರ ವೂಬಿನ್ ಸಿನ್ ಅವರನ್ನು 6-3, 6-2ರ ನೇರ ಸೆಟ್‌ಗಳಿಂದ ಪರಾಭವಗೊಳಿಸಿದರು.
ಇನ್ನು 2ನೇ ಶ್ರೇಯಾಂಕಿತ ಬೊಗ್ದಾನ್ ಬೊರೊವ್, ಅಭಿನವ ಷಣ್ಮುಗಂ ಅವರಿಂದ ಕಠಿಣ ಕ್ಷಣ ಎದುರಿಸಿದರೂ ಅಂತಿಮವಾಗಿ 6-2, 6-4ರಿಂದ ಜಯಶಾಲಿಯಾದರು. -್ರಾನ್ಸ್‌ನ 6ನೇ ಶ್ರೇಯಾಂಕಿತ ಆಟಗಾರ ಫ್ಲೋರೆಂಟ್ ಬ್ಯಾಕ್ಸ್ ನೆದರ್‌ಲ್ಯಾಂಡ್‌ನ ಸ್ಟಿಂಜ್ ಪೆಲ್ ಅವರನ್ನು 6-2, 2-0 ಅಂಕಗಳಿಂದ ಸೋಲಿಸಿದರು.
ಇನ್ನೊಂದು ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಮಾಧವಿನ್ ಕಾಮತ್, ಫೈಸಲ್ ಖಮರ್‌ಗೆ 7-6 (3), 6-2ರಿಂದ ಸೋಲಿನ ರುಚಿಯುಣಿಸಿದರು. ಮಾಧವಿನ್ ಕಾಮತ್ ಮತ್ತು ಸೂರಜ್ ಪ್ರಬೋಧ ತಮ್ಮ ಮೊದಲ ಸುತ್ತಿನ ಪಂದ್ಯ ಗೆಲ್ಲುವ ಮೂಲಕ ಗೆಲುವಿನ ಪಯಣ ಮುಂದುವರಿಸಿದರು. ವೈಲ್ಡ ಕಾರ್ಡ್ ಮೂಲಕ ಅರ್ಹತೆ ಪಡೆದಿರುವ ಮನೀಶ ಗಣೇಶ ಅವರನ್ನು ಮಾಧವಿನ್ 6-3, 6-4ರಿಂದ ಸೋಲುಣಿಸಿದರು. 2 ಗಂಟೆ 20 ನಿಮಿಷದ ಸುದೀರ್ಘ ಪಂದ್ಯದಲ್ಲಿ ಸೂರಜ್, ರಾಘವ ಜೈಸಿಂಘಾನಿ ಅವರನ್ನು 6-4, 6-4 ಅಂಕಗಳಿಂದ ಪರಾಭವಗೊಳಿಸಿದರು.
* ಸಿಂಗಲ್ಸ ಪಂದ್ಯಗಳ ಫಲಿತಾಂಶ:
ಮನೀಶ ಕಾಮತ್ ಅವರನ್ನು ಮ್ವನ್ ಕಾಮತ್ 6-3, 6-4ರಿಂದ, ಡಿ. ಪ್ರಜ್ವಲ್ ದೇವ್ ಆಸ್ಟ್ರೇಲಿಯಾದ ಲ್ಯೂಕ್ ಸೊರೆನ್‌ಸನ್ ಅವರನ್ನು 7-5, 6-4ರಿಂದ, ಇಷಾಕ್ ಇಕ್ಬಾಲ್, ಮನೀಶ ಸುರೇಶಕುಮಾರ ಅವರನ್ನು 6-3, 6-3ರಿಂದ ಪರಾಭವಗೊಳಿಸಿದರು.
ರಾಮಕುಮಾರ ರಾಮನಾಥನ್ -ೈಸಲ್ ಖಮರ್ ಅವರನ್ನು 7-6 (3), 6-2ರಿಂದ, ಸಿದ್ದಾರ್ಥ ರಾವತ್ ಶಿವಾಂಕ ಭಟ್ನಾಗರ ಅವರನ್ನು 6-4, 6-2ರಿಂದ, ರಿಷಭ್ ಅಗ್ರವಾಲ ಜಗಮೀತ್‌ಸಿಂಗ್ ಅವರನ್ನು 6-4, 6-2ರಿಂದ, ಪ್ರಾನ್ಸ್‌ನ ಫ್ರ್ರೋರೆಂಟ್ ಬ್ಯಾಕ್ಸ್ ಅವರು ನೆದರ್‌ಲ್ಯಾಂಡ್‌ನ ಸ್ಟಿಂಜ್ ಪೆಲ್ ಅವರನ್ನು 6-2, 2-0 ಅಂಕಗಳಿಂದ ಪರಾಭವಗೊಳಿಸಿದರು.
ಮತ್ತೊಂದು ಪಂದ್ಯದಲ್ಲಿ, ಇಟಲಿಯ ಎನ್‌ರಿಕೋ ಗೈಸೋಮಿನಿ ದೇವ್ ಜಾವಿಯಾ ಅವರನ್ನು 6-3, 7-6 (2) ಅಂಕಗಳಿಂದ ಸೋಲಿಸಿದರು. ರಂಜಿತ್ ಮುರುಗೇಶನ್ ಮತ್ತು ನಿಕಿ ಕಲಿಯಾಂಡಾ ನಡುವಿನ ಪಂದ್ಯ 7-5 ಅಂಕಗಳಿದ್ದಾಗ ನಿಕಿ ಕಲಿಯಾಂಡಾ ಆಟದಿಂದ ನಿವೃತ್ತರಾದರು.
ಸೂರಜ್ ಪ್ರಬೋಧ ರಾಘವ ಜೈಸಿಂಘಾನಿ ಅವರನ್ನು 6-4, 6-4ರಿಂದ, ಬೋಗ್ದಾನ್ ಬೊಬ್ರೊವ್ ಅಭಿನವ ಸಂಜೀವ ಷಣ್ಮುಗಂ ಅವರನ್ನು 6-2, 6-4 ಅಂಕಗಳಿಂದ, ಅಮೆರಿಕದ ನಿಕ್ ಚಾಪೆಲ್ ಕೋರಿಯಾ ಆಟಗಾರ ವೂಬಿನ್ ಸಿನ್ ಅವರನ್ನು 6-3, 6-3 ಅಂಕಗಳಿಂದ, ಜಪಾನ್‌ನ ಖಾಜುಕಿ ನಿಶಿವಾಕಿ ತಮ್ಮದೇ ದೇಶದ ರೈಟಾರೋ ಮಸ್ತುಮುರಾ ಅವರನ್ನು 6-2, 7-5ರಿಂದ ಪರಾಭವಗೊಳಿಸಿದರು.
ಪೂರವ್‌ರಾಜಾ ಮತ್ತು ರಾಮಕುಮಾರ ರಾಮನಾಥನ್ ಜೋಡಿ ಮತ್ತು ದಿಗ್ವಿಜಯ ಪ್ರತಾಪಸಿಂಗ್ ಹಾಗೂ ಕರಣಸಿಂಗ ಜೋಡಿಯ ಡಬಲ್ಸ್ ಪಂದ್ಯ ಮೊದಲ ಸೆಟ್‌ನಲ್ಲಿ 6-7 ಅಂಕಗಳಾಗಿದ್ದಾಗ ಮಂದಬೆಳಕಿನಿಂದ ಗುರುವಾರಕ್ಕೆ ಮುಂದೂಡಲ್ಪಟ್ಟಿತು.