ಶಿಕ್ಷಣದಲ್ಲಿ ಉತ್ತುಂಗಕ್ಕೇರಿದ ಧಾರವಾಡ

16 vikram 8
Published on

ವಿಕ್ರಮ ನಾಡಿಗೇರ ಧಾರವಾಡ
ಮಲೆನಾಡಿನ ಸೆರಗು ಹಾಗೂ ಧಾರಾನಗರಿ ಎಂದೇ ಬೀಗುತ್ತಿರುವ ಧಾರವಾಡಕ್ಕೆ "ವಿದ್ಯಾಕಾಶಿ' ಎಂಬ ಹೆಸರೂ ಇದೆ. ಈ ವಿದ್ಯಾಕಾಶಿ ಮೊದಲಿನಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಇದೀಗ ಅದರ ಸ್ಥಾನ ಮತ್ತಷ್ಟು ಉತ್ತುಂಗಕ್ಕೆ ಏರಿದೆ.
ಕರ್ನಾಟಕ ವಿಶ್ವ ವಿದ್ಯಾಲಯ, ಕರ್ನಾಟಕ ಕಾಲೇಜು, ಕೃಷಿ ವಿಶ್ವ ವಿದ್ಯಾಲಯ, ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯ, ಕರ್ನಾಟಕ ವೈದ್ಯಕಿಯ ಕಾಲೇಜು, ಇತ್ತೀಚೆಗೆ ಆರಂಭವಾದ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆ್​ ಟೆಕ್ನಾಲಜಿ (ಐಐಟಿ)ಗಳಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯನ್ನು ಗುರುತಿಸುವಂತೆ ಮಾಡಿವೆ. ಇವುಗಳ ಜತೆಗೆ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಶಿಕ್ಷಣ ಕ್ಷೇತ್ರದಲ್ಲಿ ಸ್ಮರಣೀಯ ಸೇವೆ ಸಲ್ಲಿಸುತ್ತಿವೆ. ಇದೇ ಕಾರಣಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾಕಾಶಿ ಧಾರವಾಡ ತನ್ನ ಪಾರುಪತ್ಯವನ್ನು ಮುಂದುವರೆಸಿದೆ.
ಇಲ್ಲಿನ ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಗುಣಮಟ್ಟದ ಶಿಕ್ಷಣಕ್ಕೆ ಇಡೀ ರಾಜ್ಯದ ಜನರೇ ಮಾರು ಹೋಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾಥಿರ್ಗಳ ಜತೆಗೆ ಹೊರ ರಾಜ್ಯದ ಮಕ್ಕಳೂ ಆಗಮಿಸುತ್ತಿದ್ದಾರೆ. ಇದು ಜಿಲ್ಲೆ ಶೈಕ್ಷಣಿಕವಾಗಿ ಎಷ್ಟು ಶ್ರೀಮಂತವಾಗಿ ಬೆಳೆದಿದೆ ಎಂಬುದಕ್ಕೆ ಸಾಯಾಗಿದೆ. ಕೇವಲ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಮಾತ್ರವಲ್ಲದೆ, ನಗರದ ಅದೆಷ್ಟೋ ಜನರ ಹೊಟ್ಟೆ ತುಂಬಿಸಲು ಸಹ ಪರೋಕ್ಷವಾಗಿ ಸಹಕಾರಿಯಾಗಿದೆ.
ನಗರದಲ್ಲಿ ಸಾಕಷ್ಟು ಅತ್ಯುತ್ತಮ ಶಾಲೆ&ಕಾಲೇಜುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಇವುಗಳ ಜತೆಗೆ ಸ್ಪರ್ಧಾತ್ಮಕ ಪರೀೆಗಳ ತರಬೇತಿ ನೀಡುವ ಕೇಂದ್ರಗಳೂ ಕಡಿಮೆ ಇಲ್ಲ. ಹೀಗಾಗಿ ಒಮ್ಮೆ ಜಿಲ್ಲೆಯ ಶಾಲೆಯೊಂದರಲ್ಲಿ ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆದರೆ ಸಾಕು. ತಮ್ಮ ಜೀವನ ಇಡೀ ಶಿಕ್ಷಣವನ್ನು ಒಂದೇ ಕಡೆಯಲ್ಲಿ ಪಡೆಯಬಹುದು ಎನ್ನುವಷ್ಟರ ಮಟ್ಟಿಗೆ ವಿದ್ಯಾಕಾಶಿ ಬೆಳೆದಿದೆ. ಇಲ್ಲಿನ ಶಿಕ್ಷಣದ ಮಹಿಮೆ ಅರಿತು ಬೇರೆ ರಾಜ್ಯಗಳ ಅನೇಕ ಜನರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಆಗಮಿಸಿ ಇಲ್ಲೇ ಜೀವನ ಸಾಗಿಸುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀೆಯಲ್ಲಿ ಜಿಲ್ಲೆಯ ವಿದ್ಯಾಥಿರ್ಗಳು ಸಾಕಷ್ಟು ಸಂಖ್ಯೆಯಲ್ಲಿ ರಾಜ್ಯ ಮಟ್ಟದ ರ್ಯಾಂಕ್​ ಪಡೆದು ಇಡೀ ರಾಜ್ಯದ ಗಮನ ಸೆಳೆದಿದ್ದರು. ಇದೇ ಕಾರಣಕ್ಕೆ ನಗರದ ಕೆ.ಇ. ಬೋರ್ಡ್​ ಶಾಲೆ ರ್ಯಾಂಕ್​ಗಳ ಬ್ಯಾಂಕ್​ ಎಂದು ಹೆಸರಾಗಿತ್ತು. ಇದೀಗ ಜಿಲ್ಲೆಯ ವಿದ್ಯಾಥಿರ್ಗಳು ರಾಜ್ಯ ಮಟ್ಟದಲ್ಲಿ ರ್ಯಾಂಕ್​ ಪಡೆಯುವುದು ಕಡಿಮೆಯಾಗಿದ್ದರೂ, ಗುಣಮಟ್ಟದ ಶಿಕ್ಷಣಕ್ಕೆ ಮಾತ್ರ ಎಂದಿಗೂ ಕೊರತೆ ಉಂಟಾಗಿಲ್ಲ. ಹೀಗಾಗಿಯೇ ಜನರು ಶಿಕ್ಷಣಕ್ಕಾಗಿ ಧಾರವಾಡಕ್ಕೆ ಆಗಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net