ಪ್ರೊ. ಅನಿಲ ಸಹಸ್ರಬುದ್ದೆ ಆಶಯ; ತಂತ್ರಜ್ಞಾನ ಕ್ಷೇತ್ರದ ಪ್ರಗತಿ ಕೊಡುಗೆ ನೀಡಲು ಸಜ್ಜಾಗಿ

13 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟçಗಳನ್ನು ಹಿಂದಿಕ್ಕಿ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಸಾಫ್ಟ್ವೇರ್ ಅಭಿವೃದ್ಧಿ, ಎಐ ತಂತ್ರಜ್ಞಾನ, 5ಜಿ ತಂತ್ರಜ್ಞಾನ, ಹೈಸ್ಪೀಡ್ ರೈಲು, ಅತ್ಯುತ್ತಮ ಮೂಲ ಸೌಕರ್ಯ, ರಕ್ಷಣಾ ವಲಯದ ಸುಧಾರಿತ ಸಲಕರಣೆಗಳ ಉತ್ಪಾದನೆಯಲ್ಲಿ ಮೇಲುಗೈ ಸಾಽಸಿದೆ. ಐಐಐಟಿಯಂಥ ಉನ್ನತ ಪದವೀಧರರಾದ ನೀವು ತಂತ್ರಜ್ಞಾನ ಕ್ಷೇತ್ರದ ಪ್ರಗತಿಗೆ ಕೊಡುಗೆ ನೀಡಲು ಸನ್ನದ್ಧರಾಗಬೇಕು ಎಂದು ರಾಷ್ಟಿçÃಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ ಅಧ್ಯಕ್ಷ ಪ್ರೊ. ಅನಿಲ ಸಹಸ್ರಬುದ್ದೆ ಹೇಳಿದರು.
ನಗರದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಸಂಸ್ಥೆಯ 6ನೇ ಘಟಿಕೋತ್ಸವದಲ್ಲಿ ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಪರಸ್ಪರ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಬೇಕು. ಈ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಿ ಭಾರತವನ್ನು ಅಭಿವೃದ್ಧಿಶೀಲ ರಾಷ್ಟçವನ್ನಾಗಿಸಲು ಶ್ರಮಿಸಬೇಕು. ನೀವೆಲ್ಲ ಉನ್ನತ ಪದವೀಧರರಾಗಿ ಮೈಲುಗಲ್ಲು ಸಾಽಸಿದ್ದೀರಿ. ನಿಮ್ಮ ಮುಂದೆ ಉನ್ನತ ಶಿಕ್ಷಣ, ಉದ್ಯೋಗ ಅಥವಾ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯ ಅವಕಾಶಗಳಿವೆ. ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಕಲಿಕೆ ನಿರಂತರವಾಗಿರಬೇಕು. ಧಾರವಾಡ ಐಐಐಟಿ ಸಂಸ್ಥೆಯ ಹಿರಿಮೆಯನ್ನು ದೇಶ- ವಿದೇಶಗಳಲ್ಲಿ ಪಸರಿಸಿ ಎಂದರು.
ಐಐಐಟಿ ಕುಲಸಚಿವ ರವಿ ಬಿ. ವಿಟ್ಲಾಪುರ, ನಿರ್ದೇಶಕ ಪ್ರೊ. ಎಸ್.ಆರ್. ಮಹದೇವ ಪ್ರಸನ್ನ, ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಇದ್ದರು.
ಯಶಸ್ವಿ ಸಿಂಗ್‌ಗೆ 2 ಚಿನ್ನದ ಪಕದ: ಬಿ.ಟೆಕ್ ಕೋರ್ಸ್ನ ಶೈಕ್ಷಣಿಕ ಸಾಧನೆಗೆ ಯಶಸ್ವಿ ಸಿಂಗ್‌ಗೆ ರಾಷ್ಟçಪತಿ ಚಿನ್ನದ ಪದಕ ಹಾಗೂ ಐಐಐಟಿ ಸಾಂಸ್ಥಿಕ (ಡಿಎಸ್‌ಎಐ) ಚಿನ್ನದ ಪದಕ ಪ್ರದಾನ ಮಾಡಲಾಯಿತು. ಗೌರಂಗ್ ಸುಭಾಷ ಬೆಲೆಕರಗೆ ನಿರ್ದೇಶಕರ ಚಿನ್ನದ ಪದಕ, ಸ್ಯಾಮುಯೆಲ್ ಸ್ಟ್ಯಾನ್ಲಿ ಮ್ಯಾಥ್ಯೂಗೆ ಐಐಐಟಿ ಸಾಂಸ್ಥಿಕ (ಸಿಎಸ್‌ಇ) ಚಿನ್ನದ ಪದಕ, ರಾಕೇಶ ರೌಶನ್‌ಗೆ ಐಐಐಟಿ ಸಾಂಸ್ಥಿಕ (ಇಸಿಇ) ಚಿನ್ನದ ಪದಕ ಹಾಗೂ ಪೂರ್ಣಿಮಾಗೆ ಶ್ರೀಮತಿ ನಾಗಮಣಿ ಮತ್ತು ಶ್ರೀ ಶೇಷಾದ್ರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
248 ವಿದ್ಯಾರ್ಥಿಗಳಿಗೆ ಪದವಿ, ಇಬ್ಬರಿಗೆ ಪಿಎಚ್.ಡಿ :
ಇದೇವೇಳೆ ಶೋಭನ್ ಕುಮಾರ ಹಾಗೂ ಅಭಿಲಾಷ ಸಿ.ಬಿ. ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿAಗ್ ವಿಭಾಗದ 129, ಡಾಟಾ ಸೈನ್ ಆ್ಯಂಡ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಭಾಗದ 60 ಹಾಗೂ ಇಲೆಕ್ಟಾçನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿAಗ್ ವಿಭಾಗದ 59 ಸೇರಿ 248 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net