ಹೈಕೋರ್ಟ್ ಲೋಕ ಅದಾಲತ್‌ನಲ್ಲಿ 180 ಪ್ರಕರಣ ಇತ್ಯರ್ಥ

web 66
Published on

ಧಾರವಾಡ: ಇಲ್ಲಿನ ಹೈಕೋರ್ಟ್ ಪೀಠದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 180 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಹಿರಿಯ ನ್ಯಾಯಮೂರ್ತಿ ಶ್ರೀನಿವಾಸ ಹರೀಶಕುಮಾರ ಅವರ ಮಾರ್ಗದರ್ಶನದಲ್ಲಿ ನ್ಯಾಯಮೂರ್ತಿಗಳಾದ ಹಂಚಾಟೆ ಸಂಜೀವಕುಮಾರ, ಜೆ.ಎಂ. ಖಾಜಿ, ಜಿ. ಬಸವರಾಜ ಮತ್ತು ರಾಮಚಂದ್ರ ಡಿ. ಹುದ್ದಾರ ಅವರೊಂದಿಗೆ ಲೋಕ ಅದಾಲತ್‌ನ ಸದಸ್ಯರಾದ ಬಸವರಾಜ ಎಸ್. ಸಾತಣ್ಣವರ, ಚೇತನಾ ಎಸ್. ಬಿರಾಜ, ಲಿಂಗೇಶ ವಿ. ಕಟ್ಟೆಮನೆ ಮತ್ತು ಪ್ರಶಾಂತ ಕಾಡದೇವರ ಅವರನ್ನೊಳಗೊಂಡ ೪ ಪೀಠಗಳನ್ನು ಆಯೋಜಿಸಲಾಗಿತ್ತು ಎಂದು ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಮತ್ತು ಅಽಕ ವಿಲೇಖನಾಽಕಾರಿ ವೆಂಕಟೇಶ ಆರ್. ಹುಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net