ಧಾರವಾಡ ದಸರಾ ಜಂಬೂಸವಾರಿ ಉತ್ಸವ 11ರಂದು

2 Dwd 1 (Gururaj Hunasimarad)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಗಾಂಽನಗರದ ಧಾರವಾಡ ದಸರಾ ಜಂಬೂಸವಾರಿ ಉತ್ಸವ ಸಮಿತಿಯಿಂದ ದಸರಾ ಹಬ್ಬದ ಅಂಗವಾಗಿ ಅ. 3ರಿಂದ 12ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ. 11ರಂದು ದಸರಾ ಜಂಬೂಸವಾರಿ ಉತ್ಸವ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಗುರುರಾಜ ಹುಣಶಿಮರದ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮÁತನಾಡಿದ ಅವರು, 3ರಂದು ಸಂಜೆ 6 ಗಂಟೆಗೆ ವಿವಿಧ ಕಲಾಮೇಳಗಳ ಮೆರವಣಿಯೊಂದಿಗೆ ಈಶ್ವರ ದೇವಸ್ಥಾನದಲ್ಲಿ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ನಡೆಯುವುದು. ಅ. 11ರಂದು ಮಧ್ಯಾಹ್ನ 2.30 ಗಂಟೆಗೆ ಬಂಡೆಮ್ಮ ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಮೆರವಣಿಗೆಯು ಗಾಂಽನಗರ, ವಿದ್ಯಾಗಿರಿ, ಟೋಲ್‌ನಾಕಾ, ಬಾಗಲಕೋಟೆ ಪೆಟ್ರೋಲ್ ಬಂಕ್, ಹೊಸಯಲ್ಲಾಪುರ, ಕಾಮನಕಟ್ಟಿ, ಗಾಂಽಚೌಕ್, ಸುಭಾಸ ರಸ್ತೆ, ಉಪವನ ಮೂಲಕ ಕಲಾಭವನದಲ್ಲಿ ಸಂಪನ್ನಗೊಳ್ಳುವುದು. 12ರಂದು ರಾತ್ರಿ 9 ಗಂಟೆಗೆ ದೇವಿ ಮೂರ್ತಿಯ ವಿಸರ್ಜನೆ ಕಾರ್ಯಕ್ರಮವಿದೆ ಎಂದರು.
ಅ. 7ರಿಂದ 12ರವರೆಗೆ ಈಶ್ವರ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 7ರಿಂದ 9ರವರೆಗೆ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಫ್ಯಾಷನ್ ಶೋ ಹಾಗೂ ಅಡುಗೆ ಸ್ಪರ್ಧೆ, ಮಕ್ಕಳಿಗಾಗಿ ಹಾಡಿನ ಸ್ಪರ್ಧೆ, ಫ್ಯಾಷನ್ ಶೋ, ಏಕಪಾತ್ರಾಭಿನಯ ಹಾಗೂ ಗುಂಪುನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net