

ವಿಜಯವಾಣಿ ಸುದ್ದಿಜಾಲ ಧಾರವಾಡ
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿದ್ಯಾಕಾಶಿ ಧಾರವಾಡ ಜಿಲ್ಲೆ 17ನೇ ಸ್ಥಾನ ಪಡೆದಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಸೇರಿ ಮೊದಲ ಬಾರಿ ಪರೀಕ್ಷೆಗೆ ಹಾಜರಾದ (ಫ್ರೆಶರ್ಸ್) ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ 72.32ರಷ್ಟಾಗಿದೆ.
25,463 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 18,414 ಜನ ಪಾಸಾಗಿದ್ದಾರೆ. 2023- 24ನೇ ಸಾಲಿನಲ್ಲಿ ಜಿಲ್ಲೆ 23ನೇ ಸ್ಥಾನದಲ್ಲಿದ್ದರೂ ಉತ್ತೀರ್ಣರಾದವರ ಪ್ರಮಾಣ ಶೇ.80.70ರಷ್ಟಿತ್ತು. ಈ ಬಾರಿ 6 ಸ್ಥಾನ ಮೇಲಕ್ಕೇರಿದ್ದರೂ ಉತ್ತೀರ್ಣ ಪ್ರಮಾಣದಲ್ಲಿ ಕುಸಿತ ಕಂಡಿದೆ.