

ವಿಜಯವಾಣಿ ಸುದ್ದಿಜಾಲ ಧಾರವಾಡ
ಕವಿ, ಸಾಹಿತಿ ತಾನು ಪ್ರತಿಪಾದಿಸಬೇಕಾದ ಸತ್ಯ ಮತ್ತು ಮËಲ್ಯಗಳಲ್ಲಿ ಅಹಂಕಾರ ಮತ್ತು ವಿನಯತೆ ಮಿತಿ ಮೀರದಂತಿರಬೇಕು. ಇದು ಇಂದಿನ ಅಗತ್ಯತೆ. ಆದರೆ, ಇದರ ಕೊರತೆ ಕಾಣುತ್ತಿದೆ ಎಂದು ಹಿರಿಯ ಸಾಹಿತಿ ಡಾ. ಮೃತ್ಯುಂಜಯ ರುಮಾಲೆ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿರುವ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಾಹಿತ್ಯ ಹೇಳುವ ಸತ್ಯಕ್ಕೆ ಪ್ರಭುತ್ವ ಹೆದರುತ್ತದೆ. ಸಾಹಿತ್ಯ ತನ್ನ ಸತ್ಯ ಪ್ರತಿಪಾದನೆಯಿಂದ ಪ್ರಭುತ್ವವನ್ನು ಎದುರು ಹಾಕಿಕೊಳ್ಳುತ್ತದೆ. ಕವಿ ಅಥವಾ ಸಾಹಿತಿ ಹೇಳುವ ಸತ್ಯದ ಸೂಕ್ಷ÷್ಮತೆಯನ್ನು ಸಮಾಜ ಅರ್ಥ ಮÁಡಿಕೊಳ್ಳಬೇಕು ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಕೆ.ಎಸ್. ಶಮÁð ಅವರು ಸಮ್ಮೇಳನಾಧ್ಯಕ್ಷ ಡಾ. ಎಸ್.ಆರ್. ಗುಂಜಾಳ ಅವರಿಗೆ ಪರಿಷತ್ ಧ್ವಜ ಹಸ್ತಾಂತರಿಸಿದರು. ಸರ್ವಾಧ್ಯಕ್ಷರ ಸಾಹಿತ್ಯ ಪ್ರದರ್ಶನಕ್ಕೆ ಎಸ್. ಬಾಲಾಜಿ ಚಾಲನೆ ನೀಡಿದರು. ಚನ್ನಪ್ಪ ಅಂಗಡಿ ಸಂಪಾದನೆಯ `ಆ ಗೀಡಾ ಈ ಗೀಡಾ' ಪುಸ್ತಕವನ್ನು ಪ್ರೊ. ಐ.ಜಿ. ಸನದಿ ಬಿಡುಗಡೆಗೊಳಿಸಿದರು. ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಆಶಯ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ ಎನ್.ಎಚ್. ಕೋನರೆಡ್ಡಿ, ಮಾಜಿ ಶಾಸಕಿ ಸೀಮಾ ಮಸೂತಿ, ಈರೇಶ ಅಂಚಟಗೇರಿ, ಸತೀಶ ತುರಮರಿ, ಡಾ. ಡಿ.ಎಂ. ಹಿರೇಮಠ, ಶಂಕರ ಕುಂಬಿ, ಡಾ. ಜಿನದತತ ಹಡಗಲಿ, ಶಂಕರ ಹಲಗತ್ತಿ, ಇತರರು ವೇದಿಕೆಯಲ್ಲಿದ್ದರು. ಪ್ರೊ. ಕೆ.ಎಸ್. ಕೌಜಲಗಿ ನಿರೂಪಿಸಿದರು. ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.