ಧಾರವಾಡ: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಗೆ ಸಂಲಗ್ನಗೊ0ಡಿರುವ ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಮಟ್ಟದ `ಧಾರವಾಡ ಕಪ್' ಪುರುಷರ ಟೆನ್ನಿಸ್ ಪಂದ್ಯಾವಳಿ ಅ. 24ರಿಂದ 26ರವರೆಗೆ ನಡೆಯಲಿದೆ.
ಪುರುಷರ ಮುಕ್ತ ಸಿಂಗಲ್ಸ್ ಜೊತೆಗೆ 35+, 45+, 55+, 65+ ಹಾಗೂ 70+ ವಯೋಗುಂಪಿನವರಿಗಾಗಿ ಡಬಲ್ಸ್ ಪಂದ್ಯಗಳು ನಡೆಯಲಿವೆ. ಮುಕ್ತ ಸಿಂಗಲ್ಸ್ ಪಂದ್ಯಗಳು ನಾಕೌಟ್ ಆಧಾರದ ಮೇಲೆ ಮತ್ತು ಡಬಲ್ಸ್ ಪಂದ್ಯಗಳು ಲೀಗ್ ಮತ್ತು ನಾಕೌಟ್ ಆಧಾರದ ಮೇಲೆ ನಡೆಯಲಿವೆ. ರಾಜ್ಯದ ವಿವಿಧ ಭಾಗಗಳಿಂದ 350ಕ್ಕೂ ಹೆಚ್ಚು ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಪಂದ್ಯಾವಳಿಗಾಗಿ `ರಾಜಾಧ್ಯಕ್ಷ ಪೆವಿಲಿಯನ್'ನ 4 ಸಿಂಥೆಟಿಕ್ ಹಾಗೂ ಒಂದು ಮಣ್ಣಿನ ಅಂಗಣ ಹೊನಲು- ಬೆಳಕಿನ ಸೌಲಭ್ಯದೊಂದಿಗೆ ಸಿದ್ಧಗೊಂಡಿದೆ. ಜಿಮಾಖಾನಾ ಕ್ಲಬ್‌ನ ಮಣ್ಣಿನ ಅಂಗಣದಲ್ಲೂ ಪಂದ್ಯಗಳು ನಡೆಯಲಿವೆ. ಬೆಳಗ್ಗೆ 7 ಗಂಟೆಗೆ ಪಂದ್ಯಗಳು ಆರಂಭವಾಗಲಿದ್ದು, ಅಂತಿಮ ಪಂದ್ಯ ಅ. 26ರ ಸಂಜೆ ನಡೆಯಲಿದೆ. ವಿಜೇತರಿಗೆ ಆಕರ್ಷಕ ಟ್ರೋಫಿ, ನಗದು ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.