ಮಕ್ಕಳ ಸಾಹಿತಿ ಈಶ್ವರ ಕಮ್ಮಾರ ಹೃದಯಘಾತದಿಂದ ನಿಧನ

KAMMAR
Published on

ಧಾರವಾಡ: ಮಕ್ಕಳ ಹಿರಿಯ ಸಾಹಿತಿ ಈಶ್ವರ ಕಮ್ಮಾರ (88) ಇಂದು (ಮಂಗಳವಾರ) ನಸುಕಿನ ಜಾವದಲ್ಲಿ ಹೃದಯಘಾತದಿಂದ ಮೃತಪಟ್ಟರು. ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಅವರ ಮನೆಯಲ್ಲಿ ನಿಧನರಾದರು.

ಮಕ್ಕಳ ಸಾಹಿತ್ಯ ಲೋಕ ಶ್ರೀಮಂತಗೊಳಿಸುವಲ್ಲಿ ಬಹುವಾಗಿ ಶ್ರಮಿಸಿದ್ದ ಅವರು, ನಲವತ್ತಕ್ಕೂ ಹೆಚ್ಚು ಮಕ್ಕಳ ಸಾಹಿತ್ಯದ ಕೃತಿಗಳನ್ನು ನೀಡಿದ್ದಾರೆ.

"ಮಕ್ಕಳ ಮನೆ" ಸಂಸ್ಥೆ ಕಟ್ಟುವ ಮೂಲಕ ಮಕ್ಕಳ ಪತ್ರಿಕೆ ಹಲವು ವರ್ಷಗಳವರೆಗೆ ನಡೆಸಿದರು. ಇಳಿ ವಯಸ್ಸಿನಲ್ಲೂ ನಿರಂತರವಾಗಿ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು.

ಈಶ್ವರ ಕಮ್ಮಾರ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಮರೇವಾಡದಲ್ಲಿ ಜರುವುದು ಎಂದು ಕುಟುಂಬ ವರ್ಗ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net