ದಯಾಮರಣಕ್ಕೆ ಕೋರಿ ಡಿಸಿ ಮನೆ ಮುಂದೆ ಧರಣಿ

IMG-20250220-WA0018
Published on

ರಾಯಚೂರು ಜಗದ ವಿವಾದ ಹಿನ್ನೆಲೆ ಕುಟುಂಬದ ಸದಸ್ಯರು  ದಯಾಮರಣ ಕೋರಿ ಇಲ್ಲಿನ  ಜಿಲ್ಲಾಧಿಕಾರಿ ಮನೆ ಮುಂದೆ ಗುರುವಾರ ತಡರಾತ್ರಿ ದಿಡೀರ್ ಧರಣಿ  ಮಾಡಿದ ಘಟನೆ  ನಡೆಯಿತು.

ಜಿಲ್ಲೆಯ ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಮದಲ್ಲಿನ ಹನುಮಂತ ಎಂಬುವವರ ಹೆಸರಿನಲ್ಲಿ ನಿವೇಶನ ಇದ್ದು,

ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ  ಆಪ್ತ ಎಂದು ಹೇಳಿಕೊಂಡ  ದುರ್ಗಾಪ್ರಸಾದ್ ಎನ್ನುವವರು ಅದು ತಮ್ಮ ಜಾಗವೆಂದು ದಬ್ಬಾಳಿಕೆ ಮಾಡುತ್ತಿದ್ದಾರೆಂದು ಹೋರಾಟ ನಿರತ ಕುಟುಂಬಸ್ಥರು ಆರೋಪಿಸಿದರು.

ಈ ಕುರಿತು ಸಂಪೂರ್ಣ ದಾಖಲೆಗಳೊಂದಿಗೆ  ಕವಿತಾಳ ಠಾಣೆಗೆ ದೂರು ನೀಡಿ ಪ್ರಕರಣ ದಾಖಲು ಮಾಡಿದರೂ ಇದುವರೆಗೆ  ಪೊಲೀಸರು ತಮಗೆ ರಕ್ಷಣೆ ನೀಡುತ್ತಿಲ್ಲ. ದಾಖಲೆ ಪ್ರಕಾರ ಜಾಗ ತಮಗೆ ಸೇರಿದ್ದರೂ ಆ ಜಾಗವನ್ನು ತಮಗೆ‌ ಬಳಕೆ ಮಾಡಲು ಅವಕಾಶ ನೀಡದೇ ತೊಂದರೆ ನೀಡುತ್ತಿರುವವರ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳಬೇಕು.

ತಮ್ಮ ಜಾಗ ತಮಗೆ‌ಕೊಡಿಸಬೇಕು. ಇಲ್ಲವೇ ತಮ್ಮ ಕುಟುಂಬಕ್ಕೆ  ದಯಾಮರಣ ನೀಡಿ ಎಂದು ಹೋರಾಟ ನಿರತರು ಒತ್ತಾಯಿಸಿದರು.

ಈ ವೇಳೆ‌ ಸ್ಥಳದಲ್ಲಿದ್ದ ಪೊಲೀಸರು ಸಂತ್ರಸ್ತರ ಮನವೊಲಿಕೆಗೆ ಪ್ರಯತ್ನ ಮಾಡಿ ವಿಫಲರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net