ಎರಡನೇ ದಿನಕ್ಕೆ ಅತಿಥಿ ಉಪನ್ಯಾಸಕರ ಧರಣಿ

24-11-Shiva-1
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಅತಿಥಿ ಉಪನ್ಯಾಸಕರು ಶುಕ್ರವಾರ ತರಗತಿ ಬಹಿಷ್ಕರಿಸಿ ಧರಣಿ ನಡೆಸಿದರು. ಸಿಂಧನೂರು ತಾಲೂಕು ಗೌರವಾಧ್ಯಕ್ಷ ಡಾ.ಮರಿಲಿಂಗಪ್ಪ, ಅಧ್ಯಕ್ಷ ವಿಶ್ವನಾಥ ಪಾಟೀಲ್, ಪದಾಕಾರಿಗಳಾದ ರಾಮಣ್ಣ ಬೇರಗಿ, ನರಸಣ್ಣ, ಬಸವರಾಜ ನಾಯಕ, ರುದ್ರಗೌಡ, ಮಲ್ಲಯ್ಯ ಹಿರೇಮಠ, ಶೋಭಾ ತೋರಗಲ್, ಅರುಣಕುಮಾರ, ಚಿದಾನಂದಪ್ಪ, ಶರಣಬಸವ, ಶ್ರೀನಿವಾಸ ಪಾಲ್ಗೊಂಡಿದ್ದರು.
Published on

ರಾಯಚೂರು: ಸೇವೆ ಕಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ನಡೆಸುತ್ತಿರುವ ಧರಣಿ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯದ ಸುಮಾರು 436 ಸರ್ಕಾರಿ ಪದವಿ ಕಾಲೇಜುಗಳಲ್ಲಿ ದಶಕಗಳ ಮೇಲ್ಪಟ್ಟು ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ಅರ್ಹತೆ ಹೊಂದಿರುವ ಉಪನ್ಯಾಸಕರನ್ನು ಕಾಯಂಗೊಳಿಸಬೇಕು. ಪ್ರತಿ ತಿಂಗಳು ನಿಯಮಿತವಾಗಿ ವೇತನ ಪಾವತಿಸಬೇಕು.
ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಅತಿಥಿ ಉಪನ್ಯಾಸಕರ ಕಾಯಂಗೆ ಅಗತ್ಯ ಕ್ರಮಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಧರಣಿಯಲ್ಲಿ ಸಿಂಧನೂರು ತಾಲೂಕಿನ ಉಪನ್ಯಾಸಕರು ಪಾಲ್ಗೊಂಡಿದ್ದರು.
ಸಂಘದ ಸಿಂಧನೂರು ತಾಲೂಕು ಗೌರವಾಧ್ಯಕ್ಷ ಡಾ.ಮರಿಲಿಂಗಪ್ಪ, ಅಧ್ಯಕ್ಷ ವಿಶ್ವನಾಥ ಪಾಟೀಲ್, ಪದಾಕಾರಿಗಳಾದ ರಾಮಣ್ಣ ಬೇರಗಿ, ನರಸಣ್ಣ, ಬಸವರಾಜ ನಾಯಕ, ರುದ್ರಗೌಡ, ಮಲ್ಲಯ್ಯ ಹಿರೇಮಠ, ಶೋಭಾ ತೋರಗಲ್, ಅರುಣಕುಮಾರ, ಚಿದಾನಂದಪ್ಪ, ಶರಣಬಸವ, ಶ್ರೀನಿವಾಸ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net