

ಎಚ್.ಡಿ.ಕೋಟೆ: ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ತಾಲೂಕು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಶುಕ್ರವಾರ ಸೇರಿದ ಪ್ರತಿಭಟನಾಕಾರರು, ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರು ಚಳಿಗಾಲದ ಅಧಿವೇಶನದಲ್ಲಿ ಸಂಸದರನ್ನು ಉದ್ದೇಶಿಸಿ ಅಂಬೇಡ್ಕರ್ ಅವರನ್ನು ಸ್ಮರಿಸುವ ಬದಲು ದೇವರನ್ನು ಸ್ಮರಿಸಿದರೆ ಏಳು ಜನ್ಮಗಳ ಸ್ವರ್ಗಕ್ಕೆ ಹೋಗುತ್ತಿದ್ದೀರಿ ಎಂದು ಅಂಬೇಡ್ಕರ್ ಅವರ ಬಗ್ಗೆ ಅಸಹನೆ ಮತ್ತು ದ್ವೇಷದ ಮಾತುಗಳನ್ನು ಆಡುವ ಮೂಲಕ ಅಂಬೇಡ್ಕರ್ ಅವರಿಂದ ಘನತೆಯ ಬದುಕು ಕಟ್ಟಿಕೊಂಡಿರುವ ಕೋಟ್ಯಂತರ ಭಾರತೀಯರನ್ನು ಅವಮಾನಿಸಿದ್ದಾರೆ ಎಂದು ದೂರಿದರು.
ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿದರು. ನಂತರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು. ದಸಂಸ ತಾಲೂಕು ಸಂಚಾಲಕರಾದ ಮಹೇಶ ಮಲಾರ, ಸಣ್ಣಕುಮಾರ್, ಜೀವಿಕ ಬಸವರಾಜು, ಸಿಪಿಎಂ ಶಿವಣ್ಣ, ಅಕ್ಬರ್ ಪಾಷಾ, ಮೊತ್ತ ಶಿವಮಲ್ಲಪ್ಪ, ಡಿ.ಎಂ ಶಿವಶಂಕರ, ಕಾಳಸ್ವಾಮಿ, ಕಾಳಪ್ಪಾಜಿ, ಆನಂದ ಕೆ.ಜಿ.ಹಳ್ಳಿ, ರಾಜಶೇಖರ, ನಾಗಯ್ಯ, ರಾಮಲಿಂಗಪ್ಪ, ನಾಗಣ್ಣ, ಲೋಕೇಶ, ನಾಗರಾಜು, ಸಿದ್ದರಾಜು, ರವಿ, ನಂಜಪ್ಪ, ಮಾಲಾರ ಮಹಾದೇವು ಇದ್ದರು.