ಧರ್ಮವೀರ ಪ್ರದರ್ಶನ ನಾಳೆ

5 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಶ್ರೀ ಹೆತ್ತೊಡಲು ಸಿನಿ ಕಂಬೈನ್ಸ್​ ವತಿಯಿಂದ ಎಂ. ರಂಗನಾಥ ನಿರ್ದೇಶನದಲ್ಲಿ ಸಿದ್ಧವಾಗಿರುವ "ಧರ್ಮವೀರ" ಕನ್ನಡ ಚಲನಚಿತ್ರವನ್ನು ಮಾ. 7ರಂದು ಬಿಡುಗಡೆ ಮಾಡಲಾಗುವುದು. ಅಂದಿನಿಂದ ಇಲ್ಲಿನ ಶ್ರೀನಿವಾಸ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಾಯಕ ಕಲ್ಮೇಶ ಹಾವೇರಿಪೇಟ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 7ರಿಂದ ನಿತ್ಯ ಮಧ್ಯಾಹ್ನ 3 ಹಾಗೂ ಸಂಜೆ 6 ಗಂಟೆಗೆ ಎರಡು ಪ್ರದರ್ಶನಗಳು ಇರಲಿವೆ. ಶಾಸಕ ಅರವಿಂದ ಬೆಲ್ಲದ ಪ್ರದರ್ಶನಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ಮೇಯರ್​ ರಾಮಣ್ಣ ಬಡಿಗೇರ, ನ್ಯಾಯವಾದಿ ಅರುಣ ಜೋಶಿ, ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ವಿಧಾನ ಪರಿಷತ್​ ಮಾಜಿ ಸದಸ್ಯ ನಾಗರಾಜ ಛಬ್ಬಿ, ಸವಿತಾ ಅಮರ ಶೆಟ್ಟಿ ಆಗಮಿಸಲಿದ್ದಾರೆ ಎಂದರು.

ಕಲಾವಿದ ಡಾ. ಪ್ರಭು ಹಂಚಿನಾಳ ಮಾತನಾಡಿ, ಚಿತ್ರದ ನಿರ್ಮಾಪಕ ಕಲ್ಮೇಶ ಹಾವೇರಿ ಪೇಟ ನಾಯಕರಾಗಿ ನಟಿಸಿದ್ದು, ನಾಯಕಿಯಾಗಿ ಸಿಂಧುರಾವ್​ ನಟಿಸಿದ್ದಾರೆ. ಗುರುದತ್ತ ಮುಸುರಿ ಛಾಯಾಗ್ರಹಣದಲ್ಲಿ ಮುಖ್ಯ ಭೂಮಿಕೆಯಲ್ಲಿ ಜಯಸಿಂಹ ಮುಸುರಿ, ಪಾಲಿಕೆ ಮಾಜಿ ಸದಸ್ಯ ಸುಭಾಷ ಶಿಂಧೆ, ರಂಜಿತಾ, ಚಿತ್ಕಲಾ ಬಿರಾದಾರ, ವೀಣಾ ಕಟ್ಟಿ, ಇತರರು ನಟಿಸಿದ್ದಾರೆ ಎಂದರು.

ಚಿತ್ರವನ್ನು ಧಾರವಾಡ, ಬಳ್ಳಾರಿ, ಶಿರಸಿ, ಬನವಾಸಿ, ಬೆಂಗಳೂರು ಸೇರಿ ಇತರ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ಚಿತ್ರ ಇದಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಉತ್ತರ ಕರ್ನಾಟಕ ಭಾಗದ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಅರವಿಂದ ಮುಳಗುಂಡ, ರಾಹುಲ್​ ದತ್ತಪ್ರಸಾದ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net