ಧರ್ಮಸ್ಥಳ ಸಂಘ ಸಹಕಾರಿ

24Sambaragi1
Published on

ಸಂಬರಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮದ ಅಭಿವೃದ್ಧಿ ಹಾಗೂ ನಿರಾಶ್ರಿತರಿಗೆ ಆಶ್ರಯ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ವೈದ್ಯ ಶಶಿಧರ ಕುಂಬಾರ ಹೇಳಿದರು.

ಸಮೀಪದ ಜಂಬಗಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಧರ್ಮಸ್ಥಳ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸಾಮಾನ್ಯ ಜನರಿಗೆ ಸಂಘ ಸಹಕಾರಿಯಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ವಾಘಮೊರೆ, ಯಶವಂತ ಪಾಟೀಲ, ತುಕಾರಾಮ ಮಾಳಿ, ಮಲ್ಲಿಕ್ ಯಾದವಾಡ, ದತ್ತಾ ಸೂರ್ಯವಂಶಿ, ಯೋಜನಾಧಿಕಾರಿ ಸಂಜೀವ ಮರಾಠಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net