ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯ ಸ್ಮರಣೀಯ

Dharmasthala Rural Development Institute, Ind., Hirebevanur, Dr. Virendra Heggade,
ಇಂಡಿ ತಾಲೂಕಿನ ಹಿರೇಬೆವನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ತೋಟದ ವಸ್ತಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ನೋಟಬುಕ್, ಪೆನ್ ವಿತರಣೆ ಮಾಡಲಾಯಿತು. ಸಂತೋಷಕುಮಾರ, ನಟರಾಜ ಎಲ್.ಎಂ., ಗಿರಿಮಲ್ಲ ಬಿರಾದಾರ ಇತರರಿದ್ದರು.
Published on

ಇಂಡಿ: ಸರ್ಕಾರ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳು, ಅರ್ಥಿಕ ನೆರವು, ಆರೋಗ್ಯ- ಮದ್ಯವರ್ಜನ ಶಿಬಿರಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ವೀರೇಂದ್ರ ಹೆಗ್ಗಡೆ ಅವರು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ಹೇಳಿದರು.

ತಾಲೂಕಿನ ಹಿರೇಬೆವನೂರ ಗ್ರಾಮದ ತೋಟದ ವಸ್ತಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಡಾ.ವಿರೇಂದ್ರ ಹೆಗ್ಗಡೆ ಅವರ ಹುಟ್ಟು ಹಬ್ಬದ ನಿಮಿತ್ತ ಮಕ್ಕಳಿಗೆ ಉಚಿತ ನೋಟಬುಕ್, ಪೆನ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಜನಾಧಿಕಾರಿ ನಟರಾಜ ಎಲ್.ಎಂ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ಅರ್ಥಿಕವಾಗಿ ಸ್ವಾವಲಂಬಿಗಳಾಗಲು ಸಂಘಗಳ ಮೂಲಕ ಸಾಲ ನೀಡಿ ಅರ್ಥಿಕವಾಗಿ ಸದೃಢರಾಗಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಹತ್ವದ ಕೆಲಸ ಮಾಡುತ್ತಿದೆ ಎಂದರು.

ಗ್ರಾಮದ ಗಣ್ಯರಾದ ಗಿರಿಮಲ್ಲ ಬಿರಾದಾರ ಮಾತನಾಡಿ, ಸಂಘಗಳಿಗೆ ಸಾಲ ನೀಡುವ ಕೆಲಸವನ್ನು ಬ್ಯಾಂಕ್ ಮಾಡಿದರೆ ಆ ಸಾಲದ ಸಂಪೂರ್ಣ ನಿರ್ವಹಣೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್ ಮಾಡುತ್ತಿದೆ. ಸಾಲಕ್ಕಾಗಿ ಬ್ಯಾಂಕಿಗೆ ಬರುವಂತವರಿಗೆಲ್ಲ ಅವರ ಪೂರ್ಣ ಮಾಹಿತಿ ಪಡೆದು ಸಾಲ ನೀಡುವುದು ಹಾಗೂ ನಿರ್ವಹಣೆ ಮಾಡುವದು ಬ್ಯಾಂಕ್‌ಗೆ ಕಷ್ಟವಾಗುತ್ತದೆ. ಇಂತಹ ಜವಾಬ್ದಾರಿ ಕೆಲಸವನ್ನು ಈ ಸಂಸ್ಥೆ ತುಂಬಾ ಯಶಸ್ವಿಯಾಗಿ ರಾಜ್ಯಾದ್ಯಂತ ನಡೆಸಿಕೊಂಡು ಬರುತ್ತಿದೆ ಎಂದರು.

ನಿವೃತ್ತ ಶಿಕ್ಷಕ ಬಾಳು ಬಿರಾದಾರ, ಶಾರುಖ ಶೇಖ, ಮಂಜುಳಾ ಪಾಟೀಲ, ಸತೀಶ ಬಾಳಿಕಾಯಿ, ಗುರಣ್ಣ ಪವಾಡಿ, ವಿಠ್ಠಲ ಪವಾಡಿ, ಸಂಗಯ್ಯ ಮಠಪತಿ, ಬಸವರಾಜ ಪತ್ತಾರ, ಸುಫಿಯಾ ಲಂಗೋಟಿ, ಸಿದ್ದಮ್ಮ ಮಠಪತಿ, ಯೋಜನಾಧಿಕಾರಿ ಹುಸೇನಸಾಬ ಕಾಗದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net