ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವರ ಕೆಲಸ; ಒಕ್ಕೂಟ ಪದಗ್ರಹಣ, ಸೌಲಭ್ಯ ಮಂಜೂರಾತಿ ಪತ್ರ ವಿತರಣೆ ಸಮಾರಂಭದಲ್ಲಿ ವೇದವ್ಯಾಸ ಕಾಮತ್

mng-nov23-bengare
Published on

ಮಂಗಳೂರು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಿಜವಾದ ಅರ್ಥದಲ್ಲಿ ದೇವರ ಕೆಲಸ ನಡೆಯುತ್ತಿದೆ. ಬಡವರು, ಕಷ್ಟದಲ್ಲಿ ಇರುವವರ ಕಣ್ಣಿರು ಒರೆಸಿ ಅವರಲ್ಲಿ ಧೈರ್ಯ ತುಂಬುವ, ಆರೋಗ್ಯ, ಶಿಕ್ಷಣ, ಆರ್ಥಿಕ ಅಭಿವೃದ್ಧಿ ಮೂಲಕ ಸ್ವಾವಲಂಬನೆಯ ಮಾರ್ಗಕ್ಕೆ ಉತ್ತೇಜನ ನೀಡುವ ಕೆಲಸ ಯೊಜನೆಯಿಂದ ನಡೆಯುತ್ತಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.

ಮಂಗಳೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಜಪೆ ಹಾಗೂ ಮಂಗಳೂರು ತಾಲೂಕು ವತಿಯಿಂದ ನಗರದ ಕಸಬಾ ಬೇಂಗರೆಯ ುಟ್ಬಾಲ್ ಮೈದಾನದಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಮಂಗಳೂರು ಮತ್ತು ಬಜಪೆ ಇದರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ ಕೇಂದ್ರ ಒಕ್ಕೂಟ ಪದಗ್ರಹಣ ಮತ್ತು ವಿವಿಧ ಸೌಲಭ್ಯಗಳ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಧರ್ಮಸ್ಥಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಅವರು ಬೆಂಚ್ ಡೆಸ್ಕ್ ಮಂಜೂರಾತಿ ಪತ್ರ ವಿತರಿಸಿ ಬಳಿಕ ಮಾತನಾಡಿ, ಗ್ರಾಮಾಭಿವೃದ್ದಿ ಯೋಜನೆಯ ಯಾವುದೇ ಹಣವನ್ನು ಧರ್ಮಸ್ಥಳಕ್ಕೆ ಬಳಸುವುದಿಲ್ಲ. ಅದನ್ನು ಚಾರಿಟೇಬಲ್ ಟ್ರಸ್ಟ್ ಆಗಿ ರೂಪಿಸಿ ಅದರ ಹಣವನ್ನು ಸಮಾಜಕ್ಕೆ ಬಳಸುತ್ತಿದ್ದು, ದೇಶದಲ್ಲೇ ಪಾರದರ್ಶಕವಾದ ವ್ಯವಹಾರ ಹೊಂದಿದೆ ಎಂದರು.

ಮೇಯರ್ ಮನೋಜ್ ಕುಮಾರ್ ಸುರಕ್ಷಾ ಚೆಕ್ ವಿತರಣೆ ಮಾಡಿದರು. ಬ್ಯಾಂಕ್ ಆ್ ಬರೋಡಾದ ಡಿಜಿಎಂ ಅಶ್ವಿನ್ ಕುಮಾರ್ ಲಾಭಾಂಶ ವಿತರಿಸಿದರು. ಜನಜಾಗೃತಿ ವೇದಿಕೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ಜನಮಂಗಲ ಪರಿಕರ ವಿತರಣೆ ಮಾಡಿದರು. ನಿರ್ಗತಿಕರ ಮಾಸಾಶನ ಮಂಜೂರಾತಿ ಪತ್ರ ವಿತರಣೆ ಸೇರಿದಂತೆ ನಾನಾ ಯೋಜನೆಗಳ ವಿತರಣೆ ನಡೆಯಿತು. ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸತೀಶ್ ದೀಪಂ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಹರಿಶ್ಚಂದ್ರ ಕೋಟ್ಯಾನ್, ಜನಜಾಗೃತಿ ವೇದಿಕೆ ಮಂಗಳೂರು ಅಧ್ಯಕ್ಷ ಚಂದ್ರಶೇಖರ ಉಚ್ಚಿಲ, ಸೀ ಜಾಗೃತಿ ಸಮನ್ವಯ ಅಕಾರಿ ಡಾ. ಶಂಶಾದ್ ಕುಂಜತ್ತ್‌ಬೈಲ್, ಮಹಾಬಲ ಚೌಟ, ಶಾಂತಾರಾಮ ಪೈ, ಬ್ಯಾಂಕ್ ಬರೋಡಾದ ನಿತಿನ್, ವಿಜಯ್ ಕುಮಾರ್, ಜನ ಜಾಗೃತಿ ವೇದಿಕೆ ಮಂಗಳೂರು ತಾಲೂಕು ನಿಕಟ ಪೂರ್ವ ಅಧ್ಯಕ್ಷ ಸದಾಶಿವ ಶೆಟ್ಟಿ, ಯೋಜನಾಧಿಕಾರಿಗಳಾದ ಗಿರೀಶ್ ಕುಮಾರ್ ಎಂ., ಮಮತ ಎನ್ ಶೆಟ್ಟಿ, ನೂತನ ಆಧ್ಯಕ್ಷರಾದ ಗೀತಾ ಪ್ರವೀಣ್, ರಾಜೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net