

ರಾಯಚೂರು ಧರ್ಮಸ್ಥಳದಲ್ಲಿ ಕೊಲೆಯಾದ ಸೌಜನ್ಯ ಪ್ರಕರಣ 13 ವರ್ಷಗಳಾಗಿದ್ದು, ನೈಜ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಹಸೀಪ್‌ಗೆ ಮನವಿ ಸಲ್ಲಿಸಿದರು.
ಧರ್ಮಸ್ಥಳದಲ್ಲಿ 2012 ಅಕ್ಟೋಬರ್ 2 ರಂದು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿತು, ಪ್ರಕರಣ ಸಿಐಡಿಗೆ ವಹಿಸಿತ್ತು, 2013ರಲ್ಲಿ ಮತ್ತೆ ಸಿಬಿಐಗೆ ನೀಡಲಾಯಿತು, ಇಂದಿಗೆ 13 ವರ್ಷ ಕಳದಿದೆ ನೈಜ ಆರೋಪಿಯನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ಸೌಜನ್ಯ ಅತ್ಯಾಚಾರ ಕೋಲೆ ಪ್ರಕರಣ ನೈಜ ಆರೋಪಗಳನ್ನು ಬಂಧಿಸಲು ಸೂಕ್ತ ರೀತಿಯ ತನಿಗೆಗೆ ಆದೇಶಿಬೇಕು. 20 ವರ್ಷದ ಹಿಂದೆ ಅಸಹಜ, ಕೊಲೆ, ಹಲ್ಲೆ, ಅತ್ಯಾಚಾರಗೊಳಗಾದ ಶವಗಳ ಹೂತಿಟ್ಟ ಪ್ರಕರಣ ದೂರು ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದು ಇದರಂತೆ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ದೂರುಗಳನ್ನಯ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಸೌಜನ್ಯ ಪ್ರಕರಣ ಕುರಿತು ಹೋರಾಟ ನಡೆಸಿದ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣ ರದ್ದು ಮಾಡಬೇಕು. ಧರ್ಮಸ್ಥಳ ಸೇರಿದಂತೆ ಅನೇಕ ಕೊಲೆ, ಅತ್ಯಾಚಾರ ಪ್ರಕರಣಗಳು ಸೇರಿದಂತೆ ಅನೇಕ ದೂರುಗಳಿದ್ದು ಸೂಕ್ತ ತನಿಖೆ ಮಾಡಬೇಕು, ಸರ್ಕಾರದ ಯಾವುದೇ ಒತ್ತಡಕ್ಕೆ ಮಣಿಯದೇ ಬೆದರಿಕೆ ಒಡ್ಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಕೆಜಿ ವೀರೇಶ, ಹೆಚ್.ಪದ್ಮಾ, ಆಂಜನೇಯ ಜಾಲಿಬೆಂಚಿ, ವರಲಕ್ಷ್ಮೀ, ಪ್ರವೀಣರೆಡ್ಡಿ, ಚನ್ನಾರೆಡ್ಡಿ, ಸಾಜೀದ್ ಹುಸೇನ್, ಬಷೀರ್ ಅಹ್ಮದ, ತಿಮ್ಮಪ್ಪ ಸ್ವಾಮಿ ಮಲಿಯಾಬಾದ್ ಸೇರಿದಂತೆ ಅನೇಕರು ಇದ್ದರು.