ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ಧರ್ಮಸ್ಥಳ ಚಲೋ

Published on

ಮೈಸೂರು: ಧರ್ಮಸ್ಥಳ ಚಲೋಗೆ ಬೆಂಬಲ ವ್ಯಕ್ತಪಡಿಸಿರುವ ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ಸೆ.6ರಂದು ಧರ್ಮಸ್ಥಳಕ್ಕೆ ವಾಹನದಲ್ಲಿ ತೆರಳಲಿದ್ದಾರೆ.

ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ಮಾಲೀಕರು ಕುಟುಂಬ ಸಮೇತ ಧರ್ಮಸ್ಥಳದ ಭಕ್ತಿ ಭಾವನೆಗಳ ಬೆಂಬಲಿಸಿ ಅಂದು ಬೆಳಗ್ಗೆ 5.30ಕ್ಕೆ ಮೈಸೂರು ನಜರಬಾದ್‌ನಲ್ಲಿರುವ ಹೋಟೆಲ್ ದಕ್ಷಿಣ ಪಾಕ ಬಳಿಯಿಂದ ವಾಹನಗಳು ಹೊರಟು, ರಾತ್ರಿ ಮರಳಲಿವೆ. ಭಕ್ತಾದಿ, ಹೋಟೆಲ್, ವಸತಿಗೃಹ, ರೆಸ್ಟೋರೆಂಟ್, ಸ್ವೀಟ್ಸ್, ಬೇಕರಿ ಮಾಲೀಕರು, ಸದಸ್ಯರು ಭಾಗವಹಿಸಲಿದ್ದಾರೆ. ದೇವರ ದರ್ಶನ ಪಡೆದ ಬಳಿಕ, ಧರ್ಮಸ್ಥಳಕ್ಕೆ ಬೆಂಬಲ ವ್ಯಕ್ತಪಡಿಸಿದ ಪತ್ರವನ್ನು ಡಾ.ಡಿ.ವೀರೇಂದ್ರ ಹೆಗ್ಗೆಡೆ ಅವರಿಗೆ ಹಸ್ತಾಂತರ ಮಾಡಲಾಗುವುದು ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net