ಧರ್ಮರಕ್ಷಣೆಗಾಗಿ ಧರ್ಮಸ್ಥಳ ಚಲೋ

22 08 2025_BGR_RURAL-PAGE_7A
ದೇವನಹಳ್ಳಿಯಲ್ಲಿ ಧರ್ಮರಕ್ಷಣೆಗಾಗಿ ಧರ್ಮಸ್ಥಳ ಚಲೋ ಯಾತ್ರೆ ಹೊರಟ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್​ ರಾಮಚಂದ್ರಗೌಡ, ಶಿಢ್ಲಟ್ಟ ವ ಶಾಸಕ ರಾಜಣ್ಣನ ಹಾಗೂ ನೂರಾರು ಸಂಖ್ಯೆನ್ನು ದೇವನಹಳ್ಳಿಯಲ್ಲಿ ಸ್ವಾಗತಿಸಲಾಯಿತು. ಕಾರ್ಯಕರ್ತರು.
Published on

ದೇವನಹಳ್ಳಿ : ಧರ್ಮರಕ್ಷಣೆಗಾಗಿ ಧರ್ಮಸ್ಥಳ ಚಲೋ ಎಂಬ ೂಷವಾಕ್ಯದ ಬ್ಯಾನರ್​ಗಳನ್ನು ಕಟ್ಟಿಕೊಂಡು ಖಾಸಗಿ ಬಸ್​ಗಳು ಮತ್ತು ಸುಮಾರು 500 ಕಾರುಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್​ ರಾಮಚಂದ್ರಗೌಡ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಗುರುವಾರ ಬೇಳಿಗ್ಗೆ ದೇವನಹಳ್ಳಿ ಬೈಪಾಸ್​ ಮಾರ್ಗ ಧರ್ಮಸ್ಥಳಕ್ಕೆ ತೆರಳಿದರು.

ಈ ವೇಳೆ ದೇವನಹಳ್ಳಿ ತಾಲೂಕು ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂಪರ ಸಂಟನೆಗಳ ಮುಖಂಡರು ಪಟ್ಟಣದ ರಾಣಿ ವೃತದ ಸಮೀಪ ಚಿಕ್ಕಬಳ್ಳಾಪುರ ಯಾತ್ರಿಕರನ್ನು ಸ್ವಾಗತಿಸಿ ಶುಭ ಹಾರೈಸಿ ಬೀಳ್ಕೊಟ್ಟರು. ದೇವನಹಳ್ಳಿ ತಾಲೂಕು ಮಂಡಲ ಅಧ್ಯಕ್ಷ ಎನ್​.ಎಲ್​. ಅಂಬರೀಶಗೌಡ, ಬಂಡೆ ನಾಗರಾಜ್​, ಮುರಳಿ, ಜಿ.ಎನ್​, ವೆಣುಗೋಪಾಲ್​ ಮುಂತಾದವರು ಯಾತ್ರಿಕರಿಗೆ ಶುಭಕೋರಿದರು.

ಶಿಢ್ಲಟ್ಟ ಮಾಜಿ ಶಾಸಕ ರಾಜಣ್ಣ, ಶಿಡ್ಲಟ್ಟ ತಾಲೂಕು ಅಧ್ಯಕ್ಷ ಆನಂದ್​ಗೌಡ, ಚಿಕ್ಕಬಳ್ಳಾಪುರ ಜಿಲ್ಲಾ ಸೈನಿಕ ಮೋರ್ಚಾ ಅಧ್ಯಕ್ಷ ಜಿ.ಎನ್​.ವೇಣು, ಮಾಜಿ ಅಧ್ಯಕ್ಷ ಸುರೇಂದ್ರಗೌಡ ದೇವರಾಜ್​, ಚಿಂತಾಮಣಿ ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯೆ ಸುಮಿತ್ರಮ್ಮ , ಗೌತಮಿ ಆರ್​, ಉಮಾ, ಸುನಿತಾ , ಚಿಂತಾ ಮಣಿ ಟೌನ್​ ಅಧ್ಯಕ್ಷ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಗೋಕುಲ್​ ಶೀನಿವಾಸ್​ , ಶಿವು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net