ಧರ್ಮಸ್ಥಳ ಚಲೋ ಕಾರು ರ್ಯಾಲಿಗೆ ಚಾಲನೆ

17 08 2025_BGR_RURAL-PAGE_02_NEW
ನೆಲಮಂಗಲದಲ್ಲಿ ಧರ್ಮಸ್ಥಳ ಚಲೋಗೆ ಶಾಸಕ ಎಸ್​.ಆರ್​.ವಿಶ್ವನಾಥ್​ ಚಾಲನೆ ನೀಡಿದರು. ಜನಜಾಗೃತಿ ವೇದಿಕೆ ಮಾಜಿ ವಿ.ರಾಮಸ್ವಾಮಿ, ವಿಧಾನಪರಿಷತ್​ ಮಾಜಿ ಸದಸ್ಯ ಎಂ.ಡಿ.ಲ್ಮನಾರಾಯಣ್​, ಬಮುಲ್​ ನಿರ್ದೇಶಕ ಸತೀಶ್​, ನೆ.ಯೋ.ಪ್ರಾಧಿಕಾರ ಮಾಜಿ ಸದಸ್ಯ ಮಲ್ಲಯ್ಯ, ಉದ್ಯಮಿ ಅಲೋಕ್​ವಿಶ್ವನಾಥ್​ ಇದ್ದರು.
Published on

ನೆಲಮಂಗಲ: ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಯಲಹಂಕ ಶಾಸಕ ಎಸ್​.ಆರ್​.ವಿಶ್ವನಾಥ್​ ನೇತೃತ್ವದಲ್ಲಿ ನಗರ ಲ್ಯಾಂಕೋ ಟೋಲ್​ ಬಳಿ ಧರ್ಮಸ್ಥಳ ಚಲೋ ಕಾರು ರ್ಯಾಲಿಗೆ ಚಾಲನೆ ನೀಡಿದರು. ಹಂಚೀಪುರ ಬಳಿಯ ರಾ.ಹೆದ್ದಾರಿ 75ರ ಲ್ಯಾಂಕೋ ಟೋಲ್​ ಬಳಿ ಶನಿವಾರ ಬೆಳಗ್ಗೆ ಸಮಾವೇಶಗೊಂಡ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಪೂಜಾ ವಿಧಿ&ವಿಧಾನ ನೆರವೇರಿಸಿ ನೂರಾರು ವಾಹನಗಳಲ್ಲಿ ಅಭಿಯಾನಕ್ಕೆ ವೇಗ ನೀಡಿ, 300ಕ್ಕೂ ಹೆಚ್ಚು ಕಾರುಗಳಲ್ಲಿ ಬಿಜೆಪಿ ಕಾರ್ಯಕರ್ತರು ಧರ್ಮಸ್ಥಳಕ್ಕೆ ತೆರಳಿದರು.

ಶಾಸಕ ಎಸ್​.ಆರ್​.ವಿಶ್ವನಾಥ್​ ಮಾತನಾಡಿ, ಧರ್ಮಸ್ಥಳ ಮಂಜುನಾಥಸ್ವಾಮಿ ಕ್ಷೇತ್ರ ಎಂಬುದು ಹಿಂದುಗಳ ಭಕ್ತಿಯ ಸಂಕೇತ. ಅದರ ಬಗ್ಗೆ ಅಪಾರ ಗೌರವವಿದೆ. ಆದರೇ ಕೆಲವರು ಶ್ರೀ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಬೇಸರ ಸಂಗತಿ ಎಂದರು. ಶ್ರೀ ೇತ್ರದ ಬಗ್ಗೆ ಭಕ್ತರ ವಿಶೇಷ ಭಕ್ತಿಯೊಂದಿದ್ದು ಹೊಂದಿದ್ದು, ಕೆಲ ಕಿಡಿಗೇಡಿಗಳು ಅವರ ಭಾವನೆ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಸ್​ಐಟಿ ರಚಿಸಿ ಪಾರದರ್ಶಕವಾಗಿ ಸೂಕ್ತ ತನಿಖೆ ನಡೆಸುತ್ತಿದ್ದು, ಕೆಲವರು ಸಾಮಾಜಿಕ ಜಾಲತಾಣದಲ್ಲಿ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು. ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ವಿ.ರಾಮಸ್ವಾಮಿ, ಯಲಹಂಕ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಮಾಜಿ ಅದ್ಯಕ್ಷ ಹನುಮಯ್ಯ, ಯುವಮೋರ್ಚಾ ಅದ್ಯಕ್ಷ ಆಕಾಶ್​, ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ರಾಹುಲ್​ಗೌಡ, ತಾಲೂಕು ಅದ್ಯಕ್ಷ ಜಗದೀಶ್​ಚೌಧರಿ, ಮಹಿಳಾ ಮೋರ್ಚಾ ಅದ್ಯೆ ಮಂಜುಳಾಸುರೇಶ್​, ಪ್ರಧಾನ ಕಾರ್ಯದರ್ಶಿ ಶೀಲಾ, ಮುಖಂಡ ಕೇಶವ್​, ಸುಬ್ರಮಣಿ, ಕೆಂಪರಾಮಯ್ಯ, ಎನ್​.ಎಂ.ರಾಮು, ಜಗದೀಶ್​,ಚಂದ್ರಶೇಖರ್​, ಜಿ.ಜೆ.ಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net