ಧರ್ಮಸ್ಥಳ ಪ್ರಕರಣ ಎನ್‌ಐಎಗೆ ವಹಿಸಿ : ಬಿ.ಸಿ.ರೋಡ್‌ನಲ್ಲಿ ಜನಾಗ್ರಹ ಸಭೆಯಲ್ಲಿ ಉಜಿರೆ ಅಶೋಕ್ ಭಟ್ ಆಗ್ರಹ

New Project
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ, ಅವಹೇಳನದ ಮೂಲಕ ದೇಶದ ಅಸ್ಮಿತೆಯನ್ನು ನಾಶ ವಾಡುವ ಕಾರ್ಯ ನಡೆಯುತ್ತಿದೆ. ಕ್ಷೇತ್ರದ ದಾನ ಪರಂಪರೆ ಮೇಲೆ ಆಕ್ರಮಣವಾಗುತ್ತಿದೆ. ನಮ್ಮ ಧರ್ಮ ಕ್ಷೇತ್ರದ ವಿರುದ್ಧ ಅಪಚಾರ ಆಗುವಾಗ ನಾವೆಲ್ಲ ಒಟ್ಟಾಗಿ ಮೈಕೊಡವಿ ಎದ್ದು ನಿಲ್ಲಬೇಕು. ಈ ಒಟ್ಟು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕು ಎಂದು ಯಕ್ಷಗಾನ ಅರ್ಥಧಾರಿ ಉಜಿರೆ ಅಶೋಕ್ ಭಟ್ ಆಗ್ರಹಿಸಿದರು.

ಧರ್ಮಸ್ಥಳ ಧರ್ಮ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ವಾಧಿಕಾರಿ ಮೇಲಿನ ಅವಹೇಳನ ಖಂಡಿಸಿ ಬಿ.ಸಿ.ರೋಡ್ ತಾಲೂಕು ಆಡಳಿತ ಸೌಧ ಮುಂಭಾಗ ಬುಧವಾರ ಜನಾಗ್ರಹ ಸಭೆಯಲ್ಲಿ ಮಾತನಾಡಿದರು.

ಪೂರ್ವಭಾವಿಯಾಗಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾಮಂದಿರದಲ್ಲಿ ಜನಾಗ್ರಹ ಸಭೆಯಲ್ಲಿ ವಾಜಿ ಶಾಸಕ ಎ.ರುಕ್ಮಯ ಪೂಜಾರಿ ವಾತನಾಡಿ, ಇದೊಂದು ಅಂತಾರಾಷ್ಟ್ರೀಯ ಷಡ್ಯಂತ್ರ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೇ ಹಣಕಾಸು ವ್ಯವಸ್ಥೆ ನಡೆಯುತ್ತಿದೆ. ಇಂತಹ ಷಡ್ಯಂತ್ರದ ವಿರುದ್ಧ ಜನತೆ ಜತೆಯಾಗಬೇಕು ಎಂದರು.

ಜನಜಾಗೃತಿ ವೇದಿಕೆ ವಾಜಿ ಅಧ್ಯಕ್ಷ ಪ್ರಕಾಶ್ ಕಾರಂತ್, ವಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ರಾಮದಾಸ್ ಬಂಟ್ವಾಳ, ಅಶೋಕ್ ಶೆಟ್ಟಿ ಸರಪಾಡಿ, ಸುದರ್ಶನ ಜೈನ್ ವಾತನಾಡಿದರು.

ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣಕುವಾರ್ ಪೂಂಜ, ಜನಜಾಗೃತಿ ವೇದಿಕೆ ವಾಜಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್, ಜಿಪಂ ವಾಜಿ ಸದಸ್ಯರಾದ ತುಂಗಪ್ಪ ಬಂಗೇರ, ಪದ್ಮಶೇಖರ್ ಜೈನ್, ತಾಪಂ ವಾಜಿ ಉಪಾಧ್ಯಕ್ಷ ದಿನೇಶ ಅಮ್ಟೂರು, ಸುಲೋಚನಾ ಭಟ್, ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ, ಸಂತೋಷ್ ಕುವಾರ್ ಶೆಟ್ಟಿ ಬೋಳ್ಯಾರ್, ದೇವಪ್ಪ ಕುಲಾಲ್ ಪಂಜಿಕಲ್ಲು, ಹರೀಂದ್ರ ಪೈ, ಕರುಣೇಂದ್ರ ಪೂಜಾರಿ ಕೊಂಬರಬೈಲು, ವಸಂತ ಮಣಿಹಳ್ಳ, ವಾಣಿಕ್ಯರಾಜ್ ಜೈನ್, ರಾಜೇಂದ್ರ ಜೈನ್, ಕಿರಣ್ ಹೆಗ್ಡೆ, ಚಂದ್ರಹಾಸ ಡಿ.ಶೆಟ್ಟಿ, ಪ್ರಶಾಂತ್ ಕೆಂಪುಗುಡ್ಡೆ ಮತ್ತಿತರರಿದ್ದರು.

ಸದಾನಂದ ಗೌಡ ನಾವೂರು ಸ್ವಾಗತಿಸಿದರು. ತಾಪಂ ವಾಜಿ ಸದಸ್ಯ ಪ್ರಭಾಕರ ಪ್ರಭು ಕರ್ಪೆ ಮನವಿಪತ್ರ ವಾಚಿಸಿದರು. ಬಾಲಕೃಷ್ಣ ಆಳ್ವ ಕೋಡಾಜೆ ನಿರೂಪಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net