

ಮಡಿಕೇರಿ:
ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೂರ್ನಾಡುವಿನ ಧರ್ಮಸ್ಥಳ ಭಕ್ತ ಮಂಡಳಿ ವೇದಿಕೆಯಿಂದ ಸೋಮವಾರ ಜಾಗೃತ ಮೆರವಣಿಗೆ ಮತ್ತು ಸಭೆ ನಡೆಸಲಾಯಿತು. ಮೂರ್ನಾಡು ಕಾಲೇಜು ಮೈದಾನದಿಂದ ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಗೌಡ ಸಮಾಜದಲ್ಲಿ ಸಮಾವೇಶ ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಕೊಡಗು ಜಿಲ್ಲಾ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಪಿ.ಎಂ. ರವಿ ಮಾತನಾಡಿ ದಕ್ಷಿಣದ ಕಾಶಿ ಧರ್ಮಸ್ಥಳ ಕ್ಷೇತ್ರಕ್ಕೆ 800 ವರ್ಷಗಳ ಇತಿಹಾಸವಿದ್ದು, ಆಣೆ ಪ್ರಮಾಣಕ್ಕೆ ಹೆಸರುವಾಸಿಯಾಗಿದೆ. ಕೆಲವರು ಅತ್ಯಾಚಾರಕ್ಕೆ ಒಳಗಾದ ಸೌಜನ್ಯ ಹೆಸರಿನಲ್ಲಿ ನಕಲಿ ಹೊgರತ್ತಿದ್ದಾರೆ. ಇಂಥವರ ಬಗ್ಗೆ ಹಿಂದೂಗಳು ಜಾಗೃತರಾಗಬೇಕು.
ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಧರ್ಮ ದ್ರೋಹ ಮಾಡುತ್ತಿರುವ ನಕಲಿ ಹೋರಾಟಗಾರರು ಸುಳ್ಳನ್ನು ಪದೇ ಪದೇ ಹೇಳುವ ಮೂಲಕ ಶ್ರೀ ಕ್ಷೇತ್ರದ ಬಗ್ಗೆ ಜನರಲ್ಲಿ ಇದ್ದಂಥÀ ಧಾರ್ಮಿಕ ಭಾವನೆಗೆ ದಕ್ಕೆ ತರುತ್ತಿದ್ದು ಎಡಪಂಥಿಯರ ಕುಮ್ಮಕಿನಿಂದ ನಿರಂತರ ತೇಜೊವಧೆ ಮಾಡಲಾಗುತ್ತಿದೆ. ಇವರಿಗೆ ಅಂತಾರಾಷ್ಟ್ರೀಯ ಮಟ್ಟದಿಂದ ಹಣಕಾಸಿನ ನೆರವು ದೊರಕುತ್ತಿದೆ. ಧರ್ಮ ಸಂರಕ್ಷಣೆಗೆ ನಾವೆಲ್ಲರೂ ಒಂದಾಗಬೇಕಾಗಿದೆ. ಎಐಟಿ ತನಿಖೆಯ ಜೊತೆಗೆ ಎಎನ್‌ಐ ಹಾಗೂ ಇ.ಡಿ ತನಿಖೆಯಿಂದ ಸತ್ಯಾಂಶ ಹೊರ ಬರಕೇಕಿದೆ ಎಂದರು.
ಧಾರ್ಮಿಕ ಮುಖಂಡ ಅಗೋಳಿಕಜೆ ಧನಂಜಯ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು ಹಲವಾರು ವರ್ಷಗಳಿಂದ ಶ್ರೀ ಕ್ಷೇತ್ರದ ಮುಖಾಂತರ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ. ಇದನ್ನು ಸಹಿಸದ ಕೆಲವರು ಆರೋಪಗಳನ್ನು ಮಾಡುತ್ತಿದ್ದಾರೆ. ನಕಲಿ ಹೊರಾಟಗಾರರು ಶ್ರೀ ಕ್ಷೇತ್ರಕ್ಕೆ ಅವಮಾನ, ಅಪಹಾಸ್ಯ ಮಾಡುತ್ತಿದ್ದು ಮಂಜುನಾಥ ಮತ್ತು ಅಣ್ಣಪ್ಪ ದೈವ ಕ್ಷಮಿಸುವುದಿಲ್ಲ. ಧರ್ಮಸ್ಥಳ ಕ್ಷೇತ್ರದಿಂದ ಶಿಕ್ಷಣ,ಸಾಮೂಹಿಕ ವಿವಾಹ, ಮಹಿಳೆಯರ ಸಬಲಿಕರಣಕ್ಕೆ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ನೆರವು, ಕೆರೆಗಳ ಹೂಳೆತ್ತುವುದು, ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೆರವು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಭಕ್ತ ಮಂಡಳಿ ವೇದಿಕೆ ಅಧ್ಯಕ್ಷ ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಮುಖಂಡರಾದ ಪುದಿಯೊಕ್ಕಡ ರಮೇಶ್, ಸುರೇಶ್ ಮುದ್ದಪ್ಪ, ಹೀರಾ ಸುಬ್ಬಯ್ಯ, ಮೂರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಕುಶನ್ ರೈ, ಉಪಾಧ್ಯಕ್ಷೆ ಬಿ.ಎಸ್ ರೇಖಾ, ಮೀನಾಕ್ಷಿ ಕೇಶವ, ಧರ್ಮಸ್ಥಳ ಸಂಘದ ಪದಾಧಿಕಾರಿಗಳು ವಿವಿಧ ಸಂಘದ ಪ್ರಮುಖರು ಧರ್ಮಸ್ಥಳ ಮಂಜುನಾಥನ ಭಕ್ತರು ಸಾರ್ವಜನಿಕರು ಪಾಲ್ಗೊಂಡಿದ್ದರು.