ಧರ್ಮನೇಮ ಆಮಂತ್ರಣ ಬಿಡುಗಡೆ

dharmanema
ಕುಡುಂಬೂರುಗುತ್ತು ಶ್ರೀ ಪಿಲಿಚಾಮುಂಡಿ, ಧೂಮಾವತಿ, ಜಾರಂದಾಯ ಬಂಟ ಪಂಚಶಕ್ತಿಗಳ ಧರ್ಮನೇಮೋತ್ಸವದ ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಜ್ಯೋತಿಷಿ ಶ್ರೀರಂಗ ಐತಾಳ್, ಕುಡುಂಬೂರುಗುತ್ತು ಕ್ಷೇತ್ರದ ಗುತ್ತಿನಾರ್ ಜಯರಾಮ ಶೆಟ್ಟಿ, ಕೂಳೂರುಬೀಡು ಆಶಿಕ್ ಕುಮಾರ್ ಕರ್ಣಂತಾಯ ಬಳ್ಳಾಲ, ದಿವಾಕರ ಆಳ್ವ ತೋಕೂರುಗುತ್ತು, ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ ಏಳಿಂಜೆ, ಚೆನ್ನಯ್ಯ ಮಾಡ ಕಟ್ಲ ಬೂಡು, ಬಾಲಕೃಷ್ಣ ಶೆಟ್ಟಿ ಹೊಸಬೆಟ್ಟು ಗುತ್ತಿನಾರ್ ಮೊದಲಾದವರು ಹಾಜರಿದ್ದರು.
Published on

ಮಂಗಳೂರು: ಸುರತ್ಕಲ್ ಸಮೀಪದ ಕುಡುಂಬೂರುಗುತ್ತು ಶ್ರೀ ಪಿಲಿಚಾಮುಂಡಿ, ಧೂಮಾವತಿ, ಜಾರಂದಾಯ ಬಂಟ ಪಂಚಶಕ್ತಿಗಳ ಧರ್ಮನೇಮೋತ್ಸವ ಜನವರಿ 19ರಂದು ನಡೆಯಲಿದ್ದು, ಭಾನುವಾರ ಆಮಂತ್ರಣ ಬಿಡುಗಡೆ ಮಾಡಲಾಯಿತು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಮಂತ್ರಣ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಜ್ಯೋತಿಷಿ ಶ್ರೀರಂಗ ಐತಾಳ್ ಕದ್ರಿ ದೈವಾರಾಧನೆ ಬಗ್ಗೆ ಮಾಹಿತಿ ನೀಡಿದರು. ಕುಡುಂಬೂರುಗುತ್ತು ಕ್ಷೇತ್ರದ ಗುತ್ತಿನಾರ್ ಜಯರಾಮ ಶೆಟ್ಟಿ ಧರ್ಮನೇಮೋತ್ಸವಕ್ಕೆ ಸಹಕಾರ ಯಾಚಿಸಿದರು.

ಕೂಳೂರುಬೀಡು ಆಶಿಕ್ ಕುಮಾರ್ ಕರ್ಣಂತಾಯ ಬಳ್ಳಾಲ, ದಿವಾಕರ ಆಳ್ವ ತೋಕೂರುಗುತ್ತು, ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ ಏಳಿಂಜೆ, ಚೆನ್ನಯ್ಯ ಮಾಡ ಕಟ್ಲ ಬೂಡು, ಬಾಲಕೃಷ್ಣ ಶೆಟ್ಟಿ ಹೊಸಬೆಟ್ಟು ಗುತ್ತಿನಾರ್, ಗುತ್ತಿನಾರು ಬಾಬು ಬಂಡ್ರಿಯಾಲ್ ಪಡ್ರೆ, ಶೆಡ್ಡೆಗುತ್ತು ವೇಣುಗೋಪಾಲ ಅರಸು, ಮೂಕೋಡಿ ಧೂಮ ಸುಧಾಕರ ಪೂಜಾರಿ, ಆನಂದ ಶೆಟ್ಟಿ ಸಾಂತ್ರಬೈಲು, ಭಾಗ್ಯಚಂದ್ರ ಭಟ್,ನೆತ್ತಿಲ ಬಾಳಿಕೆ ಮೋಹನ್‌ದಾಸ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು. ಜಯ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಸ್ವಾಗತಿಸಿದರು. ಸುಧಾಮ ಶೆಟ್ಟಿ, ನವೀನ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net