ಪುತ್ತೂರು: ಶೃಂಗೇರಿ ಶ್ರೀಗಳವರ ನಿರ್ದೇಶನದಂತೆ ತಾಲೂಕಿನಾದ್ಯಂತ ಧರ್ಮ ಶಿಕ್ಷಣ ಜಾರಿಗೊಳಿಸುವ ಹಿನ್ನೆಲೆಯಲ್ಲಿ ತಾಲೂಕು ಧರ್ಮ ಶಿಕ್ಷಣ ಸಮಿತಿಯನ್ನು ಪುತ್ತೂರಿನ ಸ್ವಾಮಿ ಕಲಾಮಂದಿರದಲ್ಲಿ ಘೋಷಿಸಲಾಯಿತು.
ಸಮಿತಿ ಅಧ್ಯಕ್ಷರಾಗಿ ದಂಬೆಕಾನ ಸದಾಶಿವ ರೈ, ಗೌರವಾಧ್ಯಕ್ಷರಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸಂಚಾಲಕರಾಗಿ ಸುಬ್ರಹ್ಮಣ್ಯ ನಟ್ಟೋಜ, ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಬೋರ್ಕರ್, ಸಂಯೋಜಕರಾಗಿ ಹೇಮನಾಥ ಶೆಟ್ಟಿ ಕಾವು, ಕಾರ್ಯದರ್ಶಿಯಾಗಿ ಶೈಲೇಶ್ ಜಿ.ರಾವ್, ಸುರೇಶ್ ಕೆಮ್ಮಿಂಜೆ, ಜತೆ ಕಾರ್ಯದರ್ಶಿಯಾಗಿ ವಿಶ್ವೇಶ್ವರ ಭಟ್ ಬಂಗಾರಡ್ಕ, ಖಜಾಂಚಿಯಾಗಿ ಎ.ಮಾಧವ ಸ್ವಾಮಿ, ಉಪಾಧ್ಯಕ್ಷರಾಗಿ ಸಂಜೀವ ಮಠಂದೂರು, ಚಿದಾನಂದ ಬೈಲಾಡಿ, ಕೂರೇಲು ಸಂಜೀವ ಪೂಜಾರಿ, ಡಾ.ಕೃಷ್ಣಪ್ರಸನ್ನ, ಇಂದು ಶೇಖರ್, ಕೃಷ್ಣ ಪ್ರಸಾದ್ ಬೆಟ್ಟ, ಎವಿಕೆ ನಾರಾಯಣ, ಮಂಜುನಾಥ ನಾಯ್ಕ, ನಾಗೇಶ್ ಭಟ್, ಆರ್.ಸಿ.ನಾರಾಯಣ, ಅಣ್ಣಪ್ಪ, ಮೋಹನ್ ನೆಲ್ಲಿಗುಂಡಿ, ಅವಿನಾಶ್ ಕೊಡಿಂಕಿರಿ, ದೀಕ್ಷಿತ್ ಹೆಗ್ಡೆ, ರಂಜಿತ್ ಬಂಗೇರ, ಪಿ.ಜಿ.ಜಗನ್ನಿವಾಸ ರಾವ್, ಬೂಡಿಯಾರ್ ರಾಧಾಕಷ್ಣ ರೈ, ಭಾಸ್ಕರ ಆಚಾರ್ಯ ಹಿಂದಾರ್, ನವೀನ್ ಕುಲಾಲ್, ಸತೀಶ್ ರಾವ್, ಶಶಾಂಕ ಕೊಟೇಚಾ, ಸಾಜ ರಾಧಾಕೃಷ್ಣ ಆಳ್ವ ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿ ಗೌರವ ಸಲಹೆಗಾರರಾಗಿ ಮುಗೆರೋಡಿ ಬಾಲಕೃಷ್ಣ ರೈ, ಕೇಶವ ಪ್ರಸಾದ್ ಮುಳಿಯ, ಎನ್.ಕೆ.ಜಗನ್ನಿವಾಸ ರಾವ್, ಬಲರಾಮ ಆಚಾರ್ಯ, ಪಂಜಿಗುಡ್ಡೆ ಈಶ್ವರ ಭಟ್, ಡಾ.ಸುರೇಶ್ ಪುತ್ತೂರಾಯ, ಜಯಸೂರ್ಯ ರೈ, ಯು.ಪಿ.ಶಿವಾನಂದ ಅವರನ್ನು ನೇಮಿಸಲಾಯಿತು. ಶೈಕ್ಷಣಿಕ ಸಲಹೆಗಾರರಾಗಿ ಡಾ.ಶ್ರೀಶ ಕುಮಾರ್, ಪ್ರೊ.ವತ್ಸಲಾ ರಾಜ್ಞಿ, ಡಾ.ವರದರಾಜ ಚಂದ್ರಗಿರಿ, ಗಿರಿಶಂಕರ್ ಸುಲಾಯ, ಡಾ.ರಾಜೇಶ್ ಬೆಜ್ಜಂಗಳ ಅವರನ್ನು ನಿಯುಕ್ತಿಗೊಳಿಸಲಾಯಿತು.