ಧರ್ಮ ಶಿಕ್ಷಣ ಸಮಿತಿ ರಚನೆ

PTR_12 APR_5
Published on

ಪುತ್ತೂರು: ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ನಿರ್ದೇಶನದನ್ವಯ ಪುತ್ತೂರಾದ್ಯಂತ ಧರ್ಮಶಿಕ್ಷಣ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಗ್ರಾಮಸಮಿತಿಗಳು ರೂಪುಗೊಂದಿದ್ದು, ಬೆಳ್ಳಿಪ್ಪಾಡಿಯಲ್ಲಿ ಧರ್ಮ ಶಿಕ್ಷಣ ಸಮಿತಿಯನ್ನು ಬೆಳ್ಳಿಪ್ಪಾಡಿಯ ಸುಬ್ರಹ್ಮಣ್ಯ ಭಜನಾ ಮಂಡಳಿ ಕೇದ್ರಿತವಾಗಿ ಸಮಿತಿ ರಚಿಸಲಾಗಿದೆ.

ಅಧ್ಯಕ್ಷರಾಗಿ ಸ್ಥಳೀಯರಾದ ಜಿನ್ನಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ್ ಗೌಡ ಡಿ.ವಿ., ಉಪಾಧ್ಯಕ್ಷರಾಗಿ ಲಕ್ಷ್ಮಣ ಗೌಡ, ಕಾರ್ಯದರ್ಶಿಯಾಗಿ ರಾಮಣ್ಣ ಗೌಡ, ಜತೆ ಕಾರ್ಯದರ್ಶಿಯಾಗಿ ಮೋಹನ್ ಪಕಳ, ಸಂಚಾಲಕರಾಗಿ ವಸಂತ ಕೈಲಾಜೆ, ಖಜಾಂಚಿಯಾಗಿ ಚಂದನ್ ತೆಂಕಪಾಡಿ, ಉಪಾಧ್ಯಕ್ಷರಾಗಿ ಮಲ್ಲಿಕಾ ಅಳ್ವ, ಸಂಧ್ಯಾ ರಾಮಚಂದ್ರ, ಜತೆ ಕಾರ್ಯದರ್ಶಿಯಾಗಿ ಕುಸುಮಾಧರ, ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಬಾರ್ತಿಹೊಲು ಆಯ್ಕೆಯಾದರು. ಪುತ್ತೂರು ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಮಾಧವ ಸ್ವಾಮಿ, ದಿನೇಶ್‌ಕುಮಾರ್ ಜೈನ್, ಬೆಳ್ಳಿಪ್ಪಾಡಿ ಭಾಗದ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net