ಧರ್ಮ ಶ್ರವಣದಿಂದ ಅಧಿಕ ಪುಣ್ಯ ಪ್ರಾಪ್ತಿ

mkgg
Published on

ಬಸವಾಪಟ್ಟಣ: ಎಲ್ಲ್ಲ ಮಾಸಗಳಲ್ಲಿ ಶ್ರಾವಣ ಮಾಸ ಅತ್ಯಂತ ಶ್ರೇಷ್ಠ ಮಾಸವಾಗಿದ್ದು, ಶ್ರಾವಣದಲ್ಲಿ ಧರ್ಮ ಶ್ರವಣ ಮಾಡುವುದರಿಂದ ಅಧಿಕ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ದಾವಣಗೆರೆ ಜಡೆ ಸಿದ್ಧ ಶಿವಯೋಗಾಶ್ರಮದ ಶಿವಾನಂದ ಶ್ರೀ ಹೇಳಿದರು.

ಇಲ್ಲಿನ ಗದ್ದುಗೆ ಮಠದಲ್ಲಿ ಈಚೆಗೆ ಆಯೋಜಿಸಿದ್ದ ಶ್ರಾವಣ ಮಾಸದ ಧರ್ಮ ಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶ್ರಾವಣ ಮಾಸದಲ್ಲಿ ಪೂಜೆ, ಜಪ, ಧ್ಯಾನ, ಪುಣ್ಯಕಥಾ ಶ್ರವಣ ಮಾಡುವ ಪದ್ಧತಿ ಇಂದು ನಿನ್ನೆಯದಲ್ಲ. ಅದು ಋಷಿ ಪುಂಗವರ ಕಾಲದಿಂದಲೂ ಆಚರಣೆಯಲ್ಲಿವೆ. ಹಾಗಾಗಿ, ಶ್ರವಣಾತ್ ಶ್ರಾವಣಹ ಎಂಬ ಉಕ್ತಿ ಶಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ನುಡಿದರು.

ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಮಾತನಾಡಿ, ಇಂದಿನ ದಿನಗಳಲ್ಲಿ ಎಲ್ಲರ ಮನಸುಗಳು ಒಡೆದು ಹೋಗಿವೆ. ಅಂತಹ ಒಡೆದು ಹೋದ ಮನಸುಗಳನ್ನು ಇಂತಹ ಧರ್ಮ ಸಭೆಗಳು ಒಗ್ಗೂಡಿಸುತ್ತವೆ. ಹಾಗಾಗಿ, ಸದಾಕಾಲ ಮಹಾತ್ಮರ, ಶರಣರ, ಜ್ಞಾನಿಗಳ ಸಂಘದಲ್ಲಿ ಇದ್ದು ಅವರ ಅಮರ ವಾಣಿ ಕೇಳಿ, ಕೇಳಿದ್ದನ್ನು ಮನನ ಮಾಡಿದರೆ ಮಾತ್ರ ಮನುಷ್ಯನಿಗೆ ಸದ್ಗತಿ ದೊರೆಯುತ್ತದೆ ಎಂದರು.

ಗ್ರಾಪಂ ಅಧ್ಯಕ್ಷ ಬಿ.ಜಿ. ಸಚಿನ್, ಗೀತಾ ಶಿವಕುಮಾರ್, ಕುಸುಮಾ ಡಾ. ರಂಗಪ್ಪ, ಗ್ರಾಪಂ ಮಾಜಿ ಸದಸ್ಯ ಎಂ.ಎಸ್. ಜಯಣ್ಣ ಮಾತನಾಡಿದರು.
ಕೆ.ಎಂ. ವೀರಯ್ಯ, ಎಸ್.ಆರ್. ಸುರೇಶ್, ಪೂಜಾರ್ ಮಂಜಣ್ಣ, ಅಜ್ಜಾರ ಚಂದ್ರಣ್ಣ, ಅಜ್ಜಾರ ಮಂಜಣ್ಣ, ಮುನಿಯಪ್ಪರ ಹಾಲಪ್ಪ, ಕುಮಾರ ಸ್ವಾಮಿ ಪಾಲ್ಗೊಂಡಿದ್ದರು. ಮಠದ ಕಲಾ ಬಳಗದವರಿಂದ ಸಂಗೀತ ಸೇವೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net