ನಿರಂತರ ಮಳೆಗೆ ಧರ್ಮ ಜಲಾಶಯ ಭರ್ತಿ

MND DHARMA JALASHAYA
Published on

ಮುಂಡಗೋಡ: ತಾಲೂಕಿನ ಮಳಗಿ ಸನಿಹದ ಧರ್ಮ ಜಲಾಶಯ ಭರ್ತಿಯಾಗಿ ಮಂಗಳವಾರ ಮಧ್ಯಾಹ್ನ ಕೋಡಿ ಬಿದ್ದಿದೆ. ಇದರಿಂದ ಜಲಾಶಯದ ಕೆಳ ಭಾಗದ ಸಹಸ್ರಾರು ರೈತರು ಸಂತಸಗೊಂಡಿದ್ದಾರೆ.

ತಾಲೂಕಿನ ಹನ್ನೆರಡು ಗ್ರಾಮಗಳಿಗೆ ಹಾಗೂ ಶಿರಸಿ ತಾಲೂಕಿನ ಬದನಗೋಡ ಭಾಗಗಳ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕು ಸೇರಿದಂತೆ ಸಾವಿರಾರು ರೈತರ 18 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಈ ಜಲಾಶಯವೂ ಭರ್ತಿ ಆಗಿರುವುದು ರೈತರ ಮುಖದಲ್ಲಿ ಮಂದಹಾಸ ಬೀರುವಂತಾಗಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಧರ್ಮ ಜಲಾಶಯ ನಿರಂತರವಾಗಿ ಭರ್ತಿಯಾಗುತ್ತಿದೆ. ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ಗಡಿ ಭಾಗದ ಅರಣ್ಯ ಪ್ರದೇಶದಿಂದ ಅಪಾರ ಪ್ರಮಾಣದ ಮಳೆ ನೀರು ಈ ಜಲಾಶಯಕ್ಕೆ ಹರಿದು ಬರುತ್ತದೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ನಿಗದಿತ ಅವಧಿಗಿಂತ ಮುಂಚಿತವಾಗಿ ಜಲಾಶಯ ಭರ್ತಿಯಾಗಿ ಕೋಡಿ ಹರಿಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net