ಧರ್ಮ ದಾರಿಯಲ್ಲಿ ನಡೆಯಬೇಕು

2
ಐನಾಪುರದಲ್ಲಿ ದೇವಸ್ಥಾನದ ಮಂಟಪ ಉದ್ಘಾಟನೆ ಮತ್ತು ಶಿಖರ ನಿರ್ಮಾಣದ ಅಡಿಗಲ್ಲು ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. ಸಿದ್ದರಾಮಯ್ಯ ಅಜ್ಜನವರು, ಬಸವೇಶ್ವರ ಶ್ರೀಗಳು, ಚೇತನ ಗಸ್ತಿ, ಗಣಪತಿ ಬೆಳಕೂಡ ಇತರರಿದ್ದರು.
Published on

ಐನಾಪುರ: ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಅನುಭವಿಸಬೇಕು. ಸತ್ಯವಂತರಾಗಿ ಧರ್ಮದ ದಾರಿಯಲ್ಲಿ ಬದುಕಬೇಕು ಎಂದು ಬಬಲಾದಿ ಮೂಲ ಸಂಸ್ಥಾನ ಮಠದ ಸಿದ್ದರಾಮಯ್ಯ ಅಜ್ಜನವರು ಹೇಳಿದರು.

ಪಟ್ಟಣದ ಗುಡ್ಡದ ಮಡ್ಡಿಯ ಓಂ ಶ್ರೀ ಶಕ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಂಟಪ ಉದ್ಘಾಟನೆ ಮತ್ತು ಶಿಖರ ನಿರ್ಮಾಣದ ಅಡಿಗಲ್ಲು ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಬಬಲಾದಿ ಅಜ್ಜನ ನುಡಿಯಂತೆ ಕರೊನಾ, ವಿವಿಧ ಬೆಂಕಿ ಅವಘಡ, ಭೂಕಂಪ, ಜಲಪ್ರಳಯ, ರಾಜಕೀಯ ಪಲ್ಲಟಗಳು ಬಂದು ಹೋಗಿದೆ ಎಂದರು. ಮುಖ್ಯ ಅತಿಥಿಯಾಗಿ ಅರಣ್ಯ ಇಲಾಖೆ ಅಧಿಕಾರ ಡಿಸಿಎ್ ಚೇತನ ಗಸ್ತಿ ಮಾತನಾಡಿದರು.

ಉದ್ಯಮಿ ಗಣಪತಿ ಬೆಳಕೂಡ, ಉತ್ತಮ ಪಾಟೀಲ, ಮಹಾಂತೇಶ ಮಾಳಿ, ಮಹಾಲಿಂಗ ಕುಡಚಿ, ಬಸಗೌಡ ಬಿರಾದರ, ಪ್ರಕಾಶ ಹಳ್ಳಿ, ಆನಂದ ಚಾಂಬರ, ಚಮನರಾವ ಪಾಟೀಲ, ಸುಭಾಷ ಪಾಟೀಲ, ಮಹಾವೀರ ಅವಟಿ, ಬಾಳಪ್ಪ ಮಡಿವಾಳರ,ಸುನೀಲ ಡೋಂಗರೆ ,ಕಾಶಿನಾಮ ಮುಲ್ಲಾ, ಜಯಪಾಲ ಕೊಕನೂರ, ಅಣ್ಣಪ್ಪ ಖಟಾಂವಿ, ಸದಾಶಿವ ಮಡಿವಾಳ, ಸಂತೋಷ ಕುಂಬಾರೆ, ಗುಂಡು ಜುಂಜರವಾಡ, ರಫೀಕ್ ನದ್ಾ, ರಾಜು ಜಕಾತಿ ಇತರರಿದ್ದರು. ಸುರೇಶ ಕಾಗಲಿ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಕೊರ್ಬು ಸ್ವಾಗತಿಸಿದರು. ಮಹೇಶ ಸೊಲ್ಲಾಪುರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net