

ಲಕ್ಷೆ್ಮೕಶ್ವರ: ದೇವಸ್ಥಾನಗಳು ಮನುಷ್ಯರಲ್ಲಿ ಶ್ರದ್ಧೆ, ಭಕ್ತಿ, ಧರ್ಮ ಮಾರ್ಗ ತೋರುವ ದೀವಿಗೆ ಮತ್ತು ಶಕ್ತಿ ಕೇಂದ್ರಗಳಾಗಿವೆ ಎಂದು ಬಾಲೆಹೊಸೂರು/ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನ ಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ ನೂತನವಾಗಿ ನಿರ್ವಣಗೊಂಡ ಉತ್ತರಾಭಿಮುಖಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಲೋಕಾರ್ಪಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮಗಳ ಬಳಿಕ ಜರುಗಿದ ಧರ್ಮಸಭೆಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಸರ್ಕಾರದ ಅನುದಾನವಿಲ್ಲದೇ 80 ಲಕ್ಷ ರೂ. ಖರ್ಚು ಮಾಡಿ ದೇವಸ್ಥಾನ ನಿರ್ವಿುಸಿರುವ ಗ್ರಾಮಸ್ಥರ ಕಾರ್ಯವನ್ನು ಶ್ಲಾಘಿಸಿದರು. ಸಮಾಜ ನಮಗೇನು ಮಾಡಿದೆ ಎಂಬುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ? ಎಂಬ ಆತ್ಮಸಾಕ್ಷಾತ್ಕಾರ ಎಲ್ಲರದ್ದಾಗಬೇಕು. ಸಮಾಜಮುಖಿಯಾಗಿ ಬದುಕಿದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಮಾತನಾಡಿ, ದೇವಸ್ಥಾನದ ಪ್ರಾಂಗಣದಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸುವ ಭರವಸೆ ನೀಡಿದರು.
ಆನಂದ ಗಡ್ಡದ್ದೇವರಮಠ ಮಾತನಾಡಿ, ಶ್ರೀ ದಿಂಗಾಲೇಶ್ವರ ಜಗದ್ಗುರುಗಳ ಶಕ್ತಿ-ಶ್ರೀರಕ್ಷೆ-ಆಶೀರ್ವಾದದಿಂದ ಒಂದು ವರ್ಷದೊಳಗೆ ಬಾಲೇಹೊಸೂರ ಸಂರ್ಪಸುವ ರಸ್ತೆಯನ್ನು ಪಕ್ಷಾತೀತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ದೇವಸ್ಥಾನ ಜೀಣೋದ್ಧಾರ ಕಮಿಟಿ ಅಧ್ಯಕ್ಷ ಗೋಪಾಲರಾವ್ ಕುಬೇರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಚನ್ನಮ್ಮ ಮೈಲಾರಿ, ಲಕ್ಷ್ಮಣಗೌಡ ಪಾಟೀಲ, ಸಣ್ಣೀರಪ್ಪ ಹಳ್ಳೆಪ್ಪನವರ, ಜಿ.ಆರ್. ಕೊಪ್ಪದ, ಎಂ.ಎಸ್. ದೊಡ್ಡಗೌಡ್ರ, ಚನ್ನಪ್ಪ ಜಗಲಿ, ಶಂಕ್ರಣ್ಣ ಬಾಳಿಕಾಯಿ, ಗಣೇಶ ರಾಹುತನಕಟ್ಟಿ, ರಾಮಣ್ಣ ಗಡದವರ, ಕೃಷ್ಣ ಕುಲಕರ್ಣಿ, ರಾಮಣ್ಣ ಹಾವನೂರ, ನಿಂಗಪ್ಪ ಮಡಿವಾಳರ, ಬಸವರೆಡ್ಡಿ ಹನಮರಡ್ಡಿ, ಫಕ್ಕೀರೇಶ ಮ್ಯಾಟಣ್ಣವರ, ರಾಮಪ್ಪ ಗಡದವರ, ಶಾಮಣ್ಣ ಕಡೇಮನಿ, ಭರತರಾಜ ಗುಡಗೇರಿ, ಶಿವಣ್ಣ ಕಬ್ಬೇರ, ಯಲ್ಲಪ್ಪ ಸೂರಣಗಿ, ಹೂವಪ್ಪ ದೀಪಾವಳಿ, ದೇವಣ್ಣ ಮತ್ತೂರ, ಬಸವರಾಜ ಗೂಳಣ್ಣವರ, ಗುರುಪಾದಪ್ಪ ಜಾಲವಾಡಗಿ, ಜುಂಜಪ್ಪ ಮುದಿಯಮ್ಮನವರ, ಕರಿಯಪ್ಪ ಸಾಂದ್ಲಿ, ಜಗದೀಶ ಜೋಗೇರ, ಮಾರುತಿ ಕೊಳಲ, ಸೋಮಯ್ಯ ಚನ್ನಾಪೂರಮಠ, ಲಿಂಬಯ್ಯಸ್ವಾಮಿ ಮಾದಾಪೂರಮಠ, ರಮೇಶ ಜೋಗೇರ, ಇತರರು ಉಪಸ್ಥಿತರಿದ್ದರು. ಎಂ.ಎಸ್. ಸೋಮಕ್ಕನವರ , ಕಜ್ಜರಿಯ ದೇವಸ್ಥಾನದ ಶಿಲ್ಪಿ ಗಣೇಶ ರಾಹುತನಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಿದ್ಧಲಿಂಗಯ್ಯ ಪಶುಪತಿಮಠ, ಮಾರುತಿ ಸತ್ಯಮ್ಮನವರ ಹಾಗೂ ಮೌನೇಶ ಹುದ್ದಣ್ಣವರ ನಿರ್ವಹಿಸಿದರು.